ಸುದ್ದಿ ಕಣಜ
ಶಿವಮೊಗ್ಗ: ಕಳೆದ ಒಂದು ವಾರದಿಂದ 50ರೊಳಗಿದ್ದ ಕೋವಿಡ್ ಪಾಸಿಟಿವ್ ಪ್ರಕರಣ ಬುಧವಾರ ಅರ್ಧ ಶತಕ ಬಾರಿಸಿದೆ. ಆದರೆ, ಕಾಯಿಲೆಯಿಂದ ಮೃತಪಡುವವರ ಸಂಖ್ಯೆಗೆ ಬ್ರೇಕ್ ಬಿದ್ದಿದ್ದು, ಜನರು ಮತ್ತು ಆರೋಗ್ಯ ಇಲಾಖೆಯಲ್ಲಿ ನಿರಾಳತೆ ಮೂಡಿಸಿದೆ.
ಬುಧವಾರ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, ಶಿವಮೊಗ್ಗದಲ್ಲಿ 46 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜನರಲ್ಲಿ ಸೋಂಕಿನ ಪ್ರಮಾಣ ತಿಳಿದುಕೊಳ್ಳುವ ಉದ್ದೇಶದಿಂದ ನಿರಂತರ ಮಾದರಿಗಳ ಪರೀಕ್ಷೆಯಲ್ಲಿ ಏರಿಕೆ ಮಾಡುತ್ತಲೇ ಬರಲಾಗುತ್ತಿದೆ. ಇಂದೂ ಸಹ 3369 ಜನರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿದ್ದು, 2493 ವರದಿ ಗಳು ನೆಗೆಟಿವ್ ಬಂದಿವೆ.
ಯಾವ ತಾಲೂಕಲ್ಲಿ ಎಷ್ಟು ?
ಶಿವಮೊಗ್ಗ ತಾಲೂಕಿನಲ್ಲಿ 12, ಭದ್ರಾವತಿ 7, ಶಿಕಾರಿಪುರ 3, ತೀರ್ಥಹಳ್ಳಿ 5, ಸೊರಬ, ಸಾಗರ ತಲಾ 10, ಹೊಸನಗರ 3 ಪಾಸಿಟಿವ್ ಬಂದಿವೆ.
ಫೋಟೊ: 4ಎಸ್ಎಂಜಿ ಕೋವಿಡ್