ಸುದ್ದಿ ಕಣಜ.ಕಾಂ
ಶಿವಮೊಗ್ಗ: ಅಂಡರ್ ಗ್ರೌಂಡ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದ್ದು, ಈ ಸಂಬಂಧ 11 ಕೆ.ವಿ. ಮಾರ್ಗ ಮುಕ್ತತೆ ನೀಡಲಾಗಿದೆ. ಹೀಗಾಗಿ, ನವೆಂಬರ್ 20 ಮತ್ತು 21ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಶಿವಮೊಗ್ಗ ನಗರದ ಕೆಲವೆಡೆ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಿ.ಎಸ್.ಡಿ1ರ ಎಇಇ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ವ್ಯತ್ಯಯ: 20ರಂದು ನವುಲೆ, ಎನ್.ಸಿ.ಹಾಸ್ಟೆಲ್, ಅಶ್ವತ್ ನಗರ ಜಿ.ಎಸ್.ಟಿ. ಕಚೇರಿ ಸುತ್ತಲಿನ ಪ್ರದೇಶ.
21ರಂದು ಕೃಷಿ ನಗರ 1 ಮತ್ತು 2ನೇ ಮುಖ್ಯ ರಸ್ತೆ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ ಸುತ್ತಲಿನ ಪ್ರದೇಶ.