ಸುದ್ದಿ ಕಣಜ.ಕಾಂ
ಶಿವಮೊಗ್ಗ: ಎಲ್ಲ ವಯೋಮಾನದವರಿಗೆ ತಮ್ಮಲ್ಲಿನ ಕೌಶಲ ಅನಾವರಣಕ್ಕೆ ಒನ್ ಬೆಸ್ಟ್ ಮೂಮೆಂಟ್ ಈವೆಂಟ್ಸ್ ಸಂಸ್ಥೆ ಸುವರ್ಣ ಅವಕಾಶ ಕಲ್ಪಿಸಿದೆ.
ಒನ್ ಬೆಸ್ಟ್ ಮೂವ್ಮೆಂಟ್ ಟೀಮ್-2020 ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕೆ.ಸಿ.ಮೇಘ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮದ ಸಂಯೋಜಕ ಪಂಚಾಕ್ಷರಿ ಉಪಸ್ಥಿತರಿದ್ದರು.
ವಯೋಮಾನಕ್ಕೆ ಅನುಗುಣವಾಗಿ ಕೆಟಗರಿ: ಮಿಸ್ ವಿಭಾಗದಲ್ಲಿ 18-30 ವರ್ಷ, ಮಿಸೆಸ್ ವಿಭಾಗದಲ್ಲಿ 20ರಿಂದ 40, 41-60 ಮತ್ತು 61 ಮೇಲ್ಪಟ್ಟರು. ಮಕ್ಕಳ ವಿಭಾಗದಲ್ಲಿ 4-7, 8-12 ಮತ್ತು 13 ರಿಂದ 16 ವಯಸ್ಸಿನವರು ಪಾಲ್ಗೊಳ್ಳಬಹುದಾಗಿದೆ.
ದಾವಣಗೆರೆಯಲ್ಲಿ ಫಿನಾಲೆ: ಡಿಸೆಂಬರ್ 13ರಂದು ದಾವಣಗೆರೆಯಲ್ಲಿ ಅಂತಿಮ ಸ್ಪರ್ಧೆ ಆಯೋಜಿಸಲಾಗುವುದು. ಆಸಕ್ತರು ಡಿಸೆಂಬರ್ 3ರ ಒಳಗೆ ಆನ್ಲೈನ್ ಮೂಲಕ ಆಡಿಷನ್ನಲ್ಲಿ ಪಾಲ್ಗೊಳ್ಳಬಹುದು.
ಯಾವುದಕ್ಕೆ ಅವಕಾಶ: ಪೇಂಟಿಂಗ್, ಕುಕ್ಕಿಂಗ್, ವರ್ಕ್ ಡಿಸೈನ್ ಇತ್ಯಾದಿ. ಅಲ್ಲದೆ, ನಡಿಗೆ ಶೈಲಿಯಲ್ಲೂ ಅವಕಾಶವಿದೆ. ಒಂದುವೇಳೆ, ವಿಜೇತರಾದ್ದಲ್ಲಿ ಮಿಸ್ ಮತ್ತು ಮಿಸೆಸ್ ವಿಭಾಗದಲ್ಲಿ 10 ಸಾವಿರ ರೂ. ಹಾಗೂ ಲಿಟಲ್ ಪ್ರಿನ್ಸೆಸ್’ಗೆ 5 ಸಾವಿರ ರೂ. ಬಹುಮಾನ ಕೊಡಲಾಗುವುದು.
ಮಾಹಿತಿಗಾಗಿ 8310420490, 9739748550ಗೆ ಸಂಪರ್ಕಿಸಿ.