ಸುದ್ದಿ ಕಣಜ.ಕಾಂ
ಬೆಂಗಳೂರು: ಕೋವಿಡ್ ಹಿನ್ನೆಲೆ ಶಾಲೆಗಳ ಆರಂಭಕ್ಕೆ ಸರ್ಕಾರ ಮೀನ ಮೇಷ ಎಣಿಸುತ್ತಿದೆ. ಪಾಲಕರು ಮತ್ತು ಶಿಕ್ಷಣ ತಜ್ಞರಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, 2020-21ನೇ ಶೈಕ್ಷಣಿಕ ಸಾಲಿನ ಬಹುಭಾಗ ಕೋವಿಡ್ ನುಂಗಿದೆ. ಹೀಗಾಗಿ, ಶಾಲೆ ಆರಂಭ ಮತ್ತು ಅದರ ರೂಪು ರೇಷೆ ನಿರ್ಣಯಿಸಲು ಮುಖ್ಯಮಂತ್ರಿಗಳು ನವೆಂಬರ್ 23ರಂದು ಮಧ್ಯಾಹ್ನ 12ಕ್ಕೆ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಶಾಲೆ ಪುನರಾರಂಭದ ಬಗ್ಗೆ ಬಹುತೇಕ ನಿರ್ಧಾರವಾಗುವ ಸಾಧ್ಯತೆ ಇದೆ.