ಸುದ್ದಿ ಕಣಜ.ಕಾಂ
ಬೆಂಗಳೂರು: ಬೆಂಗಳೂರು ರೈಲ್ವೆ ನಿಲ್ದಾಣದಿಂದ ರಾಜ್ಯ ಮತ್ತು ದೇಶದ ನಾನಾ ಭಾಗಗಳಿಗೆ ಪ್ರಯಾಣ ಬೆಳೆಸುವ ಮಹಿಳೆಯರಿಗೆ ರೈಲ್ವೆ ಪೊಲೀಸರ ಶಕ್ತಿ ತಂಡ ‘ಅಬ್ಬಕ್ಕ’ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ.
ಒಬ್ಬರೇ ದೂರದ ಪ್ರಯಾಣ ಬೆಳೆಸುವಾಗ ವಹಿಸಬೇಕಾದ ಎಚ್ಚರಿಕೆ, ತುರ್ತು ಸಂದರ್ಭದಲ್ಲಿ ಪೊಲೀಸರಿಗೆ ಸಂಪರ್ಕಿಸುವುದು ಹೀಗೆ ವಿವಿಧ ಅಂಶಗಳ ಕುರಿತು ತಿಳಿಹೇಳುವ ಕೆಲಸ ಮಾಡಲಾಗುತ್ತಿದೆ. ನಿತ್ಯ ಈ ತಂಡ ಪ್ರಯಾಣಿಕರಿಗೆ ಭೇಟಿಯಾಗಿ ಅವರ ಪ್ರತಿಕ್ರಿಯೆ ಕೂಡ ಪಡೆಯುತ್ತಿದೆ.