ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶಿವಮೊಗ್ಗ, ಭದ್ರಾವತಿ ಮತ್ತು ಸಾಗರದಲ್ಲಿ ಇಂದು ಹೊಸದಾಗಿ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ.
ಶುಕ್ರವಾರದಂದು 19 ಜನರಿಗೆ ಸೋಂಕು ತಗಲಿದೆ. 11 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಶಿವಮೊಗ್ಗದಲ್ಲಿ 7 ಜನರಿಗೆ ಸೋಂಕು ತಗಲಿದೆ. ಭದ್ರಾವತಿ 3, ಶಿಕಾರಿಪುರ 0, ತೀರ್ಥಹಳ್ಳಿ 3, ಸೊರಬ 0, ಸಾಗರ 6, ಹೊಸನಗರ 0 ಸೋಂಕಿತರು ಕಂಡುಬಂದಿದ್ದಾರೆ.
2086 ಜನರ ಗಂಟಲಿನ ದ್ರವವನ್ನು ಸಂಗ್ರಹಿಸಲಾಗಿದೆ. 2130 ನೆಗೆಟಿವ್ ಬಂದಿವೆ. ಆರೋಗ್ಯ ತೀವ್ರ ಸಮಸ್ಯೆ ಇರುವ ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ ದಾಖಲಿಸಲಾಗಿದೆ. 59 ಜನ ಇಲ್ಲಿದ್ದಾರೆ. ಅದೇ ರೀತಿ, ಖಾಸಗಿ ಆಸ್ಪತ್ರೆಯಲ್ಲಿ 17, ಸಿಸಿಸಿನಲ್ಲಿ 0, ಮನೆಯಲ್ಲಿ 63 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 139 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.