ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕಾಲೇಜುಗಳು ಆರಂಭಗೊಂಡು ಸೋಮವಾರಕ್ಕೆ 14 ದಿನವಾಗಿದೆ. ಈ ಅಲ್ಪ ಅವಧಿಯಲ್ಲಿಯೇ ಕೋವಿಡ್ ಪರೀಕ್ಷೆಗೆ ಒಳಪಟ್ಟ ಒಟ್ಟು 51 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.
ಕಡ್ಡಾಯವಾಗಿ ಕಾಲೇಜಿಗೆ ಬರುವ ಮುನ್ನವ ವಿದ್ಯಾರ್ಥಿಗಳು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿ ಕೋವಿಡ್ ಪರೀಕ್ಷೆಗೆ ಒಳಪಡಬೇಕೆಂದು ಸರ್ಕಾರ ನಿರ್ದೇಶನ ನೀಡಿದ್ದು, ಅದರನ್ವಯ ಜಿಲ್ಲೆಯಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತಿದೆ. ಅದರನ್ವಯ ನವೆಂಬರ್ 28ರಿಂದ 30ರ ವರೆಗಿನ ಅವಧಿಯಲ್ಲಿ 18 ಜನ ಸೋಂಕಿಗೆ ಗುರಿಯಾಗಿದ್ದಾರೆ.
27ರಂದು ಬಿಡುಗಡೆ ಮಾಡಿದ ವರದಿಯಲ್ಲಿ 33 ಜನರಿಗೆ ಸೋಂಕು ತಗಲಿತ್ತು. ಈಗದರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇದುವರೆಗೆ 42 ವಿದ್ಯಾರ್ಥಿಗಳು ಹಾಗೂ 9 ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದಿನವರೆಗೆ ಒಟ್ಟು 8148 ವಿದ್ಯಾರ್ಥಿಗಳು ಮತ್ತು 1780 ಸಿಬ್ಬಂದಿ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಸೋಮವಾರದವರೆಗಿನ ವರದಿ
25-11-2020
ಶಿವಮೊಗ್ಗ-18
ಭದ್ರಾವತಿ-8
ಸಾಗರ-2
ಒಟ್ಟು-28
27-11-2020
ಶಿವಮೊಗ್ಗ-23
ಭದ್ರಾವತಿ-8
ಸಾಗರ-2
ಒಟ್ಟು-33
30-11-2020
ಶಿವಮೊಗ್ಗ-40
ಭದ್ರಾವತಿ-9
ಸಾಗರ-2
ಒಟ್ಟು-51