ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಇದುವರೆಗೆ 7,159 ಕಂಟೈನ್ಮೆಂಟ್ ಜೋನ್’ಗಳನ್ನು ಗುರುತಿಸಿದ್ದು, ಅದರಲ್ಲಿ ಈಗಾಗಲೇ 6,500 ಕೈಬಿಡಲಾಗಿದೆ. ಪ್ರಸಕ್ತ 659 ಜೋನ್’ಗಳಿವೆ.
ಗುರುವಾರ ಹೊಸದಾಗಿ 31 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. 32 ಜನ ಗುಣಮುಖರಾಗಿದ್ದಾರೆ. ಇಂದೂ ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 347 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.
ತಾಲೂಕುವಾರು ವರದಿ: ಶಿವಮೊಗ್ಗ 21, ಭದ್ರಾವತಿ ಶಿಕಾರಿಪುರ 3, 1, ತೀರ್ಥಹಳ್ಳಿ 1, ಸೊರಬ 1, ಸಾಗರ 2, ಹೊಸನಗರ 2 ಜನರಲ್ಲಿ ಕೋವಿಡ್ ದೃಢಪಟ್ಟಿದೆ.
ಆರ್.ಟಿ-ಪಿಸಿಆರ್ ಪರೀಕ್ಷೆಗೋಸ್ಕರ ಗಂಟಲು ದ್ರವದ ಮಾದರಿಯನ್ನು ಪಡೆಯಲಾಗುತ್ತಿದ್ದು, ಗುರುವಾರ 2971 ಮಾದರಿಗಳನ್ನು ಸಂಗ್ರಹಿಸಲಾಗಿದೆ. 3004ನೆಗೆಟಿವ್ ಬಂದಿವೆ. ಜತೆಗೆ, 177 ಸಕ್ರಿಯ ಪ್ರಕರಣಗಳಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ 64, ಕೋವಿಡ್ ಕೇರ್ ಸೆಂಟರ್ 00, ಖಾಸಗಿ ಆಸ್ಪತ್ರೆಯಲ್ಲಿ 17, ಮನೆ ಆರೈಕೆಯಲ್ಲಿ 96 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.