ಶಿವಮೊಗ್ಗ: ಕೋವಿಡ್ ವಾರ್ಡ್’ನಲ್ಲಿ ಐವತ್ತಕ್ಕೂ ಕೆಳಗಿಳಿದ ಕೋವಿಡ್ ರೋಗಿಗಳ ಸಂಖ್ಯೆ ಗುರುವಾರ ಮತ್ತೆ 72ಕ್ಕೆ ಏರಿಕೆಯಾಗಿದೆ. ಬುಧವಾರ ಈ ಸಂಖ್ಯೆ 47 ಇತ್ತು.
ಆದರೆ, ಸಮಾಧಾನದ ವಿಷಯವೆಂದರೆ ಕಳೆದ ಎರಡ್ಮೂರು ದಿನಗಳಿಂದ ಕೋವಿಡ್’ನಿಂದ ಮೃತ ಪಡುವವರ ಸಂಖ್ಯೆ ಸೊನ್ನೆಗೆ ಬಂದು ತಲುಪಿದೆ. ಇದುವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 374 ಜನ ಸಾವನ್ನಪ್ಪಿದ್ದಾರೆ.
ಗುರುವಾರ 43 ಜನರಿಗೆ ಪಾಸಿಟಿವ್ ಬಂದಿದ್ದು, 21 ಜನ ಗುಣಮುಖರಾಗಿದ್ದಾರೆ.
ಯಾವ ತಾಲೂಕಿನಲ್ಲಿ ಎಷ್ಟು ಪ್ರಕರಣ ಪತ್ತೆ:
ಶಿವಮೊಗ್ಗ 14, ಭದ್ರಾವತಿ 13, ಶಿಕಾರಿಪುರ 3, ತೀರ್ಥಹಳ್ಳಿ 7, ಸೊರಬ 4, ಸಾಗರ 2 ಪ್ರಕರಣ ದೃಢಪಟ್ಟಿದೆ.