ಬೆಂಗಳೂರು: ವಿದ್ಯುತ್ ದರವನ್ನು ಪ್ರತಿ ಯೂನಿಟ್’ಗೆ ಸರಾಸರಿ 40 ಪೈಸೆ ಹೆಚ್ಚಳ ಮಾಡುವ ಮೂಲಕ ಮತ್ತೆ ಕೆಇಆರ್’ಸಿ ಗ್ರಾಹಕರಿಗೆ ಕರೆಂಟ್ ಶಾಕ್ ನೀಡಿದೆ.
ವಿದ್ಯುತ್ ಸರಬರಾಜು ಕಂಪೆನಿಗಳು ಸಲ್ಲಿಸಿದ್ದ ಪ್ರಸ್ತಾವನೆ ಮೇರೆಗೆ ದರದಲ್ಲಿ ಏರಿಕೆ ಮಾಡಿ ವಿದ್ಯುಚ್ಚಕ್ತಿ ನಿಯಂತ್ರಣ ಆಯೋಗ(ಕೆಇಆರ್’ಸಿ) ಬುಧವಾರ ಆದೇಶ ಹೊರಡಿಸಿದೆ.
ಯಾವಾಗಿಂದ ಅನ್ವಯ:
ಸರಾಸರಿ 40 ಪೈಸೆ ಹೆಚ್ಚಳ ಮಾಡಿ ಹೊರಡಿಸಿರುವ ಆದೇಶವು ನ.1 ರಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ. ಪ್ರತಿ ಯುನಿಟ್’ಗೆ 1.96 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಕಳೆದ ಮಾರ್ಚ್’ನಿಂದಲೇ ಪರಿಷ್ಕೃತ ದರ ಅನ್ವಯವಾಗಬೇಕಿತ್ತು. ಕೊರೊನಾ ಹಾಗೂ ಉಪ ಚುನಾವಣೆ ಹಿನ್ನೆಲೆ ತಡೆಹಿಡಿದಿದ್ದ ದರ ಹೆಚ್ಚಳ ಪ್ರಸ್ತಾವನೆಗೆ ಸರಕಾರ ಈಗ ಒಪ್ಪಿಗೆ ನೀಡಿದೆ.
ಎಲ್ಲೆಲ್ಲಿ ಅನ್ವಯ?
ಪರಿಷ್ಕೃತ ದರ ರಾಜ್ಯದ ಎಲ್ಲ ಎಸ್ಕಾಂಗಳಿಗೆ ಅನ್ವಯವಾಗಲಿದೆ. ಮುಂದಿನ ಐದು ತಿಂಗಳು ಅಂದರೆ 2021ರ ಮಾರ್ಚ್ವರೆಗೆ ಈ ದರ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.