ನೆದರ್’ಲ್ಯಾಂಡ್ ನಿಂದ ಬಂದ‌ ಪಾರ್ಸೆಲ್’ನಲ್ಲಿ ಅಂಥದ್ದೇನಿತ್ತು?

 

 

ಸುದ್ದಿ ಕಣಜ.ಕಾಂ
ಬೆಂಗಳೂರು: ನೆದರ್ ಲ್ಯಾಂಡ್ ನಿಂದ ಸ್ನೇಹಿತನ ಅತ್ತೆ ಕೆಲಸ‌ ಮಾಡುತ್ತಿದ್ದ ಆಸ್ಪತ್ರೆಗೆ ಡ್ರಗ್ಸ್ ತರಿಸಿಕೊಂಡು ವ್ಯವಹಾರ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದಾರೆ.
ಕೋಯಮತ್ತೂರು ಮೂಲದ ಅರುಣ್ ಕುಮಾರ್(27) ಎಂಬಾತನನ್ನೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತನಿಂದ ಎಲ್.ಎಸ್‌.ಡಿ. ಡ್ರಗ್ಸ್ ಇದ್ದ ಪಾರ್ಸೆಲ್ ವಶಪಡಿಸಿಕೊಳ್ಳಲಾಗಿದೆ.
ಕಸ್ಟಮ್ ಅಧಿಕಾರಿಗಳಿಂದ ಬಯಲಾಯ್ತು ಬಂಡವಾಳ:
ಬೆಂಗಳೂರಿನ ರಾಮಮೂರ್ತಿ ನಗರದ ಮದನ್‌ ಕುಮಾರ್ ಹಾಗೂ ಆರೋಪಿ ಅರುಣ್ ಕುಮಾರ್ ಸ್ನೇಹಿತರಾಗಿದ್ದು, ಮದನ್‌ ಕುಮಾರ್ ಅವರ ಅತ್ತೆ ಇದೇ ಬಡಾವಣೆಯ ಪಿ.ಎಚ್.ಸಿ.ನಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿಳಾಸಕ್ಕೆ ಡ್ರಗ್ಸ್ ತರಿಸಿಕೊಂಡು
ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಕಾರಿಗಳ ಪರಿಶೀಲನೆ ವೇಳೆ ಪಾರ್ಸೆಲ್‌’ನಲ್ಲಿ ಡ್ರಗ್ಸ್ ಇರುವುದು ಗೊತ್ತಾಗಿದೆ. ಈ ವಿಚಾರವನ್ನು ಕಸ್ಟಮ್ಸ್ ಅಧಿಕಾರಿಗಳು ಸಿಸಿಬಿ ಪೊಲೀಸರಿಗೆ ತಿಳಿಸಿದ್ದಾರೆ. ಪಾರ್ಸಲ್‌ ಕುರಿತು ಮದನ್ ಅತ್ತೆಗೆ ವಿಚಾರಿಸಿದಾಗ ಅವರಿಗೆ ಈ ಬಗ್ಗೆ ಮಾಹಿತಿಯೇ ತಿಳಿದಿರಲಿಲ್ಲ.
ಹೊರದೇಶದಿಂದ ಪಾರ್ಸಲ್‌ ಅರುಣ್ ಕುಮಾರ್ ಎಂಬಾತನಿಗೆ ಸೇರಿದ್ದೆಂದು ಮಾಹಿತಿ ನೀಡಿದ್ದಾರೆ. ಹೇಳಿಕೆ ಪಡೆದು ಆತನನ್ನು ವಶಕ್ಕೆ ಪಡೆದಾಗ ಆತ ಸತ್ಯ ಒಪ್ಪಿಕೊಂಡಿದ್ದಾನೆ.
ಶೋಕಿಗಾಗಿ ಡಗ್ಸ್ ದಂಧೆ:
ನವೆಂಬರ್ ಐದರಂದು ಪಾರ್ಸೆಲ್ ಪಡೆಯಲು ಬಂದಾಗ ಪೊಲೀಸರು ಬಂಧಿಸಿದ್ದಾರೆ. ಡಾರ್ಕ್‌ನೈಟ್ ಬಳಸಿ ನೆದರ್‌ ಲ್ಯಾಂಡ್‌ ನಿಂದ ಆಮದು ಮಾಡಿಸಿಕೊಂಡು ವಿದ್ಯಾರ್ಥಿಗಳು ಹಾಗೂ ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಒಪ್ಪಿಕೊಂಡಿದ್ದಾನೆ. ಅದರಿಂದ ಬಂದ ಹಣದಲ್ಲಿ ಮೋಜು ಮಸ್ತಿ, ಶೋಕಿ ಮಾಡುತ್ತಿದ್ದ ಎನ್ನಲಾಗಿದೆ.

 

Leave a Reply

Your email address will not be published. Required fields are marked *

error: Content is protected !!