ಕೋವಿಡ್ ರಿಪೋರ್ಟ್: ತೀರ್ಥಹಳ್ಳಿ, ಹೊಸನಗರದಲ್ಲಿ ಭಾನುವಾರ ಶೂನ್ಯ ಸೋಂಕು

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಭಾನುವಾರ ಯಾವುದೇ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ 14 ಜನರಿಗೆ ಸೋಂಕು ತಗಲಿದ್ದು, 48 ಜನ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಜತೆಗೆ, ಯಾವುದೇ ಸಾವು ಸಂಭವಿಸಿಲ್ಲ. ಇದುವರೆಗೆ 348 ಜನರು ಕೋವಿಡ್ ನಿಂದ ಸಾವಿಗೀಡಾಗಿದ್ದಾರೆ.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ವಾರ್ಡ್ ನಲ್ಲಿ 52, ಖಾಸಗಿ ಆಸ್ಪತ್ರೆಯಲ್ಲಿ 14, ಮನೆ ಆರೈಕೆಯಲ್ಲಿ 76 ಸೇರಿ ಒಟ್ಟು 142 ಸಕ್ರಿಯ ಪ್ರಕರಣಗಳಿವೆ. ಭಾನುವಾರ 460 ಜನ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲಾಗಿದೆ. 2561 ನೆಗೆಟಿವ್ ಬಂದಿವೆ.
ತಾಲೂಕುವಾರು ವರದಿ: ಶಿವಮೊಗ್ಗ 8, ಭದ್ರಾವತಿ 1, ಶಿಕಾರಿಪುರ 2, ತೀರ್ಥಹಳ್ಳಿ 0, ಸೊರಬ 1, ಸಾಗರ 1, ಹೊಸನಗರ 0 ಮತ್ತು ಹೊರ ಜಿಲ್ಲೆಯ 1 ಪ್ರಕರಣ ಪತ್ತೆಯಾಗಿದೆ.

Leave a Reply

Your email address will not be published. Required fields are marked *

error: Content is protected !!