ಸುದ್ದಿ ಕಣಜ.ಕಾಂ
ಶಿವಮೊಗ್ಗ: ಮೊದಲ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದೆ. ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ವ್ಯಾಪ್ತಿಯ ಒಟ್ಟು 1212 ಸ್ಥಾನಗಳಲ್ಲಿ 4111 ನಾಮಪತ್ರ ಸಲ್ಲಿಕೆಯಾಗಿದ್ದು, 11 ಸ್ಥಾನಗಳಿಗೆ ಸಲ್ಲಿಕೆಯಾಗಿಲ್ಲ.
ಡಿಸೆಂಬರ್ 7ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು 11ರಂದು ಮುಕ್ತಾಯಗೊಂಡಿದೆ. ಶಿವಮೊಗ್ಗದಲ್ಲಿ 1703, ಭದ್ರಾವತಿ 1366 ಮತ್ತು ತೀರ್ಥಹಳ್ಳಿಯಲ್ಲಿ 1042 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಇಲ್ಲಿ ಸಲ್ಲಿಕೆಯಾಗಿಲ್ಲ ನಾಮಪತ್ರ: ತಮ್ಮಡಿಹಳ್ಳಿ, ಕೊನಗವಳ್ಳಿ, ಮುದ್ದಿನಕೊಪ್ಪ, ಕೊಸಳ್ಳಿ, ಕಡೇಕಲ್, ಹೊಳೆಬೆನವಳ್ಳಿ, ಶೆಟ್ಟಿಹಳ್ಳಿ, ಸೂಗೂರು, ಹೊಳಲೂರು, ಕೊಮ್ಮನಾಳು ಮತ್ತು ಕುಂಚೇನಹಳ್ಳಿ.
ಪರಿಶಿಷ್ಟ ಜಾತಿಯ 959, ಪರಿಶಿಷ್ಟ ಪಂಗಡದ 292, ಹಿಂದುಳಿದ ಎ ಮತ್ತು ಬಿ ವರ್ಗದಿಂದ ಕ್ರಮವಾಗಿ 455, 82 ಹಾಗೂ 2323 ಸಾಮಾನ್ಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಎರಡನೇ ಹಂತದ ಮೊದಲ ದಿನ 378 ನಾಮಪತ್ರ: ಎರಡನೇ ಹಂತದಲ್ಲಿ ಶಿಕಾರಿಪುರ, ಸೊರಬ, ಸಾಗರ ಮತ್ತು ಹೊಸನಗರದಲ್ಲಿ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಮೊದಲ ದಿನ 378 ಜನ ನಾಮಪತ್ರ ಸಲ್ಲಿಕೆಯಾಗಿವೆ.