ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಮೆರಿಟ್ಯೂಡ್ ಸ್ಕಿಲ್ ಡೆವಲಪ್ ಮೆಂಟ್ ಪ್ರೈವೇಟ್ ಲಿಮಿಟೆಡ್ ತರಬೇತಿ ಕೇಂದ್ರದಲ್ಲಿ ಕೌಶಲ್ಯ ಕರ್ನಾಟಕ ವತಿಯಿಂದ ತರಬೇತಿ ಮತ್ತು ಉದ್ಯೋಗ ಅವಕಾಶ ನೀಡಲಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಎರಡ್ಮೂರು ತಿಂಗಳ ಉಚಿತ ತರಬೇತಿ ನೀಡಲಾಗುತ್ತಿದೆ.
ಈ ಕ್ಷೇತ್ರಗಳಲ್ಲಿ ತರಬೇತಿ: ಐಟಿ, ಎಲೆಕ್ಟ್ರಾನಿಕ್ಸ್, ಲಾಜಿಸ್ಟಿಕ್, ಟೆಲಿಕಾಂ, ಟೈಲರಿಂಗ್ ಹಾಗೂ ರಿಟೇಲ್ ಕ್ಷೇತ್ರಗಳಲ್ಲಿ ಉಚಿತ ಕೌಶಲ್ಯ ಹಾಗೂ ಕಂಪ್ಯೂಟರ್ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ । ವಿಡಿಯೋ ರಿಪೋರ್ಟ್: ರಾಜ್ಯದ ಹಿರಿಯ ಹೆಣ್ಣಾನೆ ಗೀತಾಳ ಅಂತ್ಯಸಂಸ್ಕಾರ ಹೇಗಾಯ್ತು ಗೊತ್ತಾ? ಇನ್ನಷ್ಟು ಕುತೂಹಲಕಾರಿ ಅಂಶಗಳು
ನೀಡಬೇಕಿರುವ ದಾಖಲೆ: 18 ರಿಂದ 35 ವಯೋಮಿತಿ ಹೊಂದಿರಬೇಕು. ಎಸ್ಎಸ್ಎಲ್ಸಿ, ಪಿಯುಸಿ, ಡಿಗ್ರಿ ಅಂಕ ಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ತೀಚಿನ 3 ಭಾವ ಚಿತ್ರ ಈ ಎಲ್ಲ ದಾಖಲೆಗಳನ್ನು ನೀಡಬೇಕು.
ಇಲ್ಲಿಗೆ ಬನ್ನಿ: ಸರ್.ಎಂ.ವಿ. ರಸ್ತೆಯಲ್ಲಿರುವ ಮಾರುತಿ ನೆಕ್ಸಾ ಷೋ ರೊಂ ಎದುರಿನ ಮೆರಿಟ್ಯೂಡ್ ಸ್ಕಿಲ್ ಡೆವಲಪ್ ಮೆಂಟ್ ಪ್ರೈ.ಲಿ. ತರಬೇತಿ ಕೇಂದ್ರಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9945409539, 8050393700 ಕರೆ ಮಾಡುವಂತೆ ತಿಳಿಸಲಾಗಿದೆ.