ಸುದ್ದಿ ಕಣಜ.ಕಾಂ
ದಾವಣಗೆರೆ: ದಾವಣಗೆರೆಯ ಒನ್ ಬೆಸ್ಟ್ ಮೂವ್ಮೆಂಟ್(ಒಬಿಜಿ) ಈವೆಂಟ್ ವತಿಯಿಂದ ಕಿಡ್ಸ್ ಮಿಸ್ ಮತ್ತು ಮಿಸೆಸ್ ಅವರಿಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯ 80ಕ್ಕೂ ಹೆಚ್ಚು ಸ್ಪರ್ಧಾಳುಗಳು ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ್ದರು. ಮೂರು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.
ಒಬಿಜಿ ಈವೆಂಟ್ಸ್ ಕಳೆದ ಒಂದೂವರೆ ವರ್ಷದಿಂದ ವಿವಿಧ ಕಾರ್ಯ ಕ್ಷೇತ್ರಗಳಲ್ಲಿ ಕೆಬಿಜಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದಲ್ಲಿ ಸಾಕಷ್ಟು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ, ಹಲವಾರು ಸಾಧನೆಗಳ ಕನಸುಗಳನ್ನು ಹೊತ್ತು ಸಾಗುತ್ತಿದೆ.
ಒಬಿಎಂ ಈವೆಂಟ್ಸ್ ತನ್ನ ಕಾರ್ಯ ವ್ಯಾಪ್ತಿಗೆ ಒಳಪಡುವ ಅಂತಹ ಖಾಸಗಿ ಮತ್ತು ಕಾರ್ಪೋರೇಟ್ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರುತ್ತಿದೆ. ಅದರ ಭಾಗವಾಗಿಯೇ
ಡಿಸೆಂಬರ್ ರಂದು ರಾಜ್ಯಮಟ್ಟದ ಸೌಂದರ್ಯ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ವಿಜೇತರ ಪಟ್ಟಿ ಇಲ್ಲಿದೆ.
ಕಿಡ್ಸ್ ವಿಭಾಗ
4ರಿಂದ 7 ವರ್ಷ: ದಾವಣಗೆರೆಯ ವಿ.ಶ್ರಾವ್ಯ (ವಿನ್ನರ್), ಜ್ಞಾನವಿ ದಾವಣಗೆರೆ (ಫಸ್ಟ್ ರನ್ನರ್ ಅಪ್), ಜಾನವಿ ಸಂತೋಷ್ (ಸೆಕೆಂಡ್ ರನ್ನರ್ ಅಪ್).
8 ರಿಂದ 12 ವರ್ಷ: ದಾವಣಗೆರೆಯ ಪ್ರಾರ್ಥನಾ (ವಿನ್ನರ್), ಧಾರವಾಡಸ ಸೃಜನ ದೇವಿ (ಫಸ್ಟ್ ರನ್ನರ್ ಅಪ್), ಅರಸೀಕೆರೆ ಪಿ.ಯಶಿಕಾ (ಸೆಕೆಂಡ್ ರನ್ನರ್ ಅಪ್).
13 ರಿಂದ 16 ವರ್ಷ: ದಾವಣಗೆರೆಯ ವಿ.ಕೆ.ದೀಕ್ಷಾ (ವಿನ್ನರ್), ಎಚ್.ಬಿ. ಮಿತಾಲಿ (ಫಸ್ಟ್ ರನ್ನರ್ ಅಪ್), ಅಪೂರ್ವ ಗುಮ್ಮನೂರು(ಸೆಕೆಂಡ್ ರನ್ನರ್ ಅಪ್).
ಮಿಸ್ ವಿಭಾಗ
ದಾವಣಗೆರೆಯ ಅಮೃತ ಪ್ರಶಾಂತ್(ವಿನ್ನರ್), ಬೆಳಗಾವಿಯ ಅಶ್ವಿನಿ ದೇಸಾಯಿ (ಫಸ್ಟ್ ರನ್ನರ್ ಅಪ್), ಹುಬ್ಬಳ್ಳಿಯ ಶ್ರೇಯಾ ರಟ್ಗಲ್ (ಸೆಕೆಂಡ್ ರನ್ನರ್ ಅಪ್).
ಮಿಸೆಸ್ ವಿಭಾಗ
20 ರಿಂ 40 ವರ್ಷ: ದಾವಣಗೆರಯ ಜಿ.ಎಂ. ಶ್ವೇತಾ (ವಿನ್ನರ್), ಸೌಮ್ಯ ಹರೀಶ್ (ಫಸ್ಟ್ ರನ್ನರ್ ಅಪ್), ರುದ್ರಾಕ್ಷಿ ಬಾಯಿ (ಸೆಕೆಂಡ್ ರನ್ನರ್ ಅಪ್).
41 ರಿಂದ 60 ವರ್ಷ: ದಾವಣಗೆರೆಯ ವಿಜಯಲಕ್ಷ್ಮಿ ಸಾಲಂಕೆ (ವಿನ್ನರ್), ಚಿತ್ರದುರ್ಗದ ಅಮೃತ ಸಂತೋಷ್ (ಫಸ್ಟ್ ರನ್ನರ್ ಅಪ್), ಬೆಂಗಳೂರಿನ ಎಚ್.ಎಸ್.ದೀಪಾ(ಸೆಕೆಂಡ್ ರನ್ನರ್ ಅಪ್).
61 ಮತ್ತು 61 ವರ್ಷ ಮೇಲ್ಪಟ್ಟವರು: ಹುಬ್ಬಳ್ಳಿಯ ಶೋಭಾರಾಣಿ ಗಜಾನನ ಪಟಕ್(ವಿನ್ನರ್), ದಾವಣಗೆರೆಯ ಜಯಮ್ಮ (ಫಸ್ಟ್ ರನ್ನರ್ ಅಪ್)