ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಬಹುತೇಕ ಎಲ್ಲ ಹಬ್ಬಗಳನ್ನು ನುಂಗಿದೆ. ಅದರ ಮಧ್ಯೆ ಸೋಂಕು ಹರಬಾರದೆಂಬ ಉದ್ದೇಶದಿಂದ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಆದರೀಗ, ಪರಿಸ್ಥಿತಿ ಹದ್ದುಬಸ್ತಿಗೆ ಬಂದಿದ್ದು, ರೈಲುಗಳ ಸಂಚಾರ ಪುನರಾರಂಭವಾಗಿದೆ.
ಕೋಟೆಗಂಗೂರು ರೈಲ್ವೆ ಕೋಚಿಂಗ್ ಡಿಪೋಗೆ ಗ್ರೀನ್ ಸಿಗ್ನಲ್, ಮಲೆನಾಡ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ
ಈ ಹಿನ್ನೆಲೆ ನೈರುತ್ಯ ರೈಲ್ವೆಯು ಹಬ್ಬದ ವಿಶೇಷ ರೈಲುಗಳನ್ನು ಓಡಿಸಲು ಮುಂದಾಗಿದೆ. ರೈಲಿನ ಸಮಯ ಮತ್ತು ಸಂಚರಿಸುವ ಮಾರ್ಗ ಎಲ್ಲವೂ ಮುಂಚಿನಂತೆಯೇ ಇರಲಿದೆ. ಆದರೆ, ಪ್ರಯಾಣಿಕರಿಗೆ ನೀಡುವ ಸೌಲಭ್ಯ ಹೈಟೆಕ್ ಇರಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಟರ್ಮಿನಲ್’ಗೆ ಹೆಚ್ಚುವರಿ ಹನ್ನೊಂದೂವರೆ ಎಕರೆ ಜಮೀನು ಮಂಜೂರು
ಯಾವ ರೈಲು
- ಡಿಸೆಂಬರ್ 18ರಿಂದ 2021ರ ಜನವರಿ 31ರ ವರೆಗೆ, ರೈಲು ಸಂಖ್ಯೆ 06227, ಮೈಸೂರು-ತಾಳಗುಪ್ಪ, ಸೀಟ್ ಸಂಖ್ಯೆ 43
- ಡಿಸೆಂಬರ್ 19ರಿಂದ 2021ರ ಜನವರಿ 31ರ ವರೆಗೆ, ರೈಲು ಸಂಖ್ಯೆ 06228, ತಾಳಗುಪ್ಪ-ಮೈಸೂರು, ಸೀಟ್ ಸಂಖ್ಯೆ 43
- ಡಿಸೆಂಬರ್ 16 ರಿಂದ 2021ರ ಜನವರಿ 30ರ ವರೆಗೆ, ರೈಲು ಸಂಖ್ಯೆ 06529, ಬೆಂಗಳೂರು-ತಾಳಗುಪ್ಪ ಸೂಪರ್ ಫಾಸ್ಟ್ ಇಂಟರ್ಸಿಟಿ, ಸೀಟ್ ಸಂಖ್ಯೆ 45
- ಡಿಸೆಂಬರ್ 17 ರಿಂದ 2021ರ ಜನವರಿ 31ರ ವರೆಗೆ, ರೈಲು ಸಂಖ್ಯೆ 06530, ತಾಳಗುಪ್ಪ-ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ಸಿಟಿ, ಸೀಟ್ ಸಂಖ್ಯೆ 45
ಸೀಟು ಮುಂಚೆಯೇ ಕಾಯ್ದಿರಿಸಬೇಕು: ಫೆಸ್ಟಿವಲ್ ಎಕ್ಸ್ಪ್ರೆಸ್ ರೈಲುಗಳಲ್ಲಿ ನಿಯಮಿತ ಸೀಟುಗಳ ವ್ಯವಸ್ಥೆ ಇರುವುದರಿಂದ ಮುಂಚಿತವಾಗಿಯೇ ಸೀಟುಗಳನ್ನು ಕಾಯ್ದಿರಿಸಬೇಕು. ಜನರಲ್ ಕೌಂಟರ್ನಲ್ಲಿ ಟಿಕೆಟ್ಗಳನ್ನು ಇದಕ್ಕಾಗಿ ನೀಡಲಾಗುವುದಿಲ್ಲ. ಇದರ ದರ ಸ್ವಲ್ಪ ಹೆಚ್ಚಿಗೆ ಇರಲಿದೆ. ಆದರೆ, ಸೌಲಭ್ಯಗಳು ಆಕರ್ಷಕವಾಗಿರಲಿವೆ.