ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಹಲವೆಡೆ ಬ್ಲಾಕ್ ಮತ್ತು ಮೋರ್ ಶಿರೋನಾಮೆಯ ನಕಲಿ ಸಿಗರೇಟುಗಳು ಮಾರಲ್ಪಡುತ್ತಿದ್ದು, ಅವುಗಳ ನಿಯಂತ್ರಣಕ್ಕಾಗಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.
ಜನವರಿ 17ರಂದು ಪಲ್ಸ್ ಪೊಲಿಯೊ, ಜಿಲ್ಲೆಯ 867 ಕೇಂದ್ರಗಳಲ್ಲಿ ಲಸಿಕೆ ಲಭ್ಯ
ಈ ವೇಳೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ, ಜ್ವರ, ಶೀತ ಇರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ, ಲಸಿಕೆ ಹಾಕುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ಕೆಎಫ್ಡಿ ಬಾಧಿತ ಪ್ರದೇಶಗಳಿಗೆ ಎರಡು ದಿನಕ್ಕೊಮ್ಮೆ ಭೇಟಿ: ಮಂಗನ ಕಾಯಿಲೆ ಭಾದಿತ ತಾಲೂಕುಗಳಲ್ಲಿನ ಆಯ್ದ ಗ್ರಾಮಗಳಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಎರಡು ದಿನಕ್ಕೊಮ್ಮೆ ಮನೆ ಮನೆ ಭೇಟಿ ನೀಡಿ, ಅಲ್ಲಿನ ಜನರ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಗಮನಹರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಕೋವಿಡ್ ರೂಲ್ಸ್ ಮಧ್ಯೆ ಜಿಲ್ಲಾಮಟ್ಟದ ಯುವಜನೋತ್ಸವ, ಯಾವ್ಯಾವ ಸ್ಪರ್ಧೆ ನಡೆಯಲಿವೆ?
ಕೋಟ್ಪಾ ಅಡಿ 1.02 ಲಕ್ಷ ದಂಡ ವಸೂಲಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಮಾತನಾಡಿ, ಪೊಲೀಸ್ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಪ್ರಸ್ತುತ ನವೆಂಬರ್ 20ರ ಮಾಸಾಂತ್ಯದವರೆಗೆ ಕೋಟ್ಪಾ ಸೆಕ್ಷನ್ 4ರ ಅಡಿ 1259 ಪ್ರಕರಣಗಳನ್ನು ದಾಖಲಿಸಿ, 1,02,830 ಲಕ್ಷ ರೂ. ದಂಡ ವಿಧಿಸಿದೆ ಎಂದರು.
2019ನೇ ಸಾಲಿನಲ್ಲಿ 5198 ಪ್ರಕರಣಗಳನ್ನು ದಾಖಲಿಸಿ 4,06,570 ರೂ. ದಂಡ ವಿಧಿಸಲಾಗಿದೆ. ಅಲ್ಲದೆ ಕೋಟ್ಪಾ ಸೆಕ್ಷನ್ 5 ಮತ್ತು 6ರ ಅಡಿಯಲ್ಲಿ 35 ಪ್ರಕರಣಗಳನ್ನು ದಾಖಲಿಸಲಾಗಿದೆ. 2020ನೇ ಸಾಲಿನ ನವೆಂಬರ್ ಅಂತ್ಯದವರೆಗೆ ವಿವಿಧ ಸೆಕ್ಷನ್ಗಳಡಿ 8952 ಪ್ರಕರಣಗಳನ್ನು ದಾಖಲಿಸಿ 8.30ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ ಉಪಸ್ಥಿತರಿದ್ದರು.