ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಆರ್ಭಟ ಹದ್ದುಬಸ್ತಿಗೆ ಬರುತ್ತಿದೆ ಎನ್ನುವಷ್ಟರಲ್ಲೇ ‘ಕೊರೊನಾ ರೂಪಾಂತರದ ವೈರಸ್’ ಕಾಟ ಆರಂಭವಾಗಿದೆ. ಇಂಗ್ಲೆಂಡ್ ನಿಂದ ಶಿವಮೊಗ್ಗಕ್ಕೆ 13 ಜನ ಆಗಮಿಸಿದ್ದು, ಅವರ ಮೇಲೆ ಆರೋಗ್ಯ ಇಲಾಖೆ ತೀವ್ರ ನಿಗಾ ಇಟ್ಟಿದೆ. ಇದರಲ್ಲಿ 22 ಜನ ಶಿವಮೊಗ್ಗಕ್ಕೆ ಬಂದಿದ್ದು, ಒಬ್ಬರು ದೆಹಲಿಯಲ್ಲೇ ಇದ್ದಾರೆ.
INFOGRAPHY | ಓಟಿಂಗ್ನಲ್ಲಿ ಬೆಳಗ್ಗೆಯಿಂದ ಮುಂದಿದ್ದ ತೀರ್ಥಹಳ್ಳಿ ಸಂಜೆ ಹೊತ್ತಿಗೆ ಹಿಂದೆ
ಲಂಡನ್ ನಿಂದ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸಿರುವ ಇವರ ಪೂರ್ಣ ಮಾಹಿತಿ ಆರೋಗ್ಯ ಇಲಾಖೆಗೆ ಲಭ್ಯ ಇರುವುದರಿಂದ ಅವರ ಮಾಹಿತಿಯನ್ನು ಕಲೆ ಹಾಕಿ ಹೋಂ ಕ್ವಾರಂಟೈನ್ ನಲ್ಲಿ ಇರಿಸಿದೆ. ಯಾವುದೇ ರೀತಿಯ ಪ್ರಮಾದಗಳಿಗೆ ಅವಕಾಶ ನೀಡಬಾರದೆಂಬ ಉದ್ದೇಶದಿಂದ ಅವರ ಗಂಟಲು ದ್ರವದ ಮಾದರಿ ಸಂಗ್ರಹಿಸಿದ್ದು, ಎಲ್ಲ ವರದಿಗಳು ನೆಗೆಟಿವ್ ಬಂದಿವೆ. ಆದರೂ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಜನಸಂಪರ್ಕಕ್ಕೆ ಬಾರದೆಂಬ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.