ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಸಂಜೆ 7.30 ಗಂಟೆಯವರೆಗೆ 244 ಪಂಚಾಯಿತಿಗಳಲ್ಲಿ 221 ಪೂರ್ಣಗೊಂಡಿದೆ. 10 ಗ್ರಾಪಂಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, 13 ಪಂಚಾಯಿತಿಗಳ ಎಣಿಕೆ ಕಾರ್ಯ ಮುಗಿದಿದ್ದು ಘೋಷಣೆಯೊಂದೇ ಬಾಕಿ ಇದೆ.
ಎಲೆಕ್ಷನ್ ನ್ಯೂಸ್ | ಕೋರ್ಟ್ ಸರ್ಕಲ್ ಬಳಿ ಜನವೋ ಜನ, ಮತ ಎಣಿಕೆ ಕೇಂದ್ರದ ಹೊರಗೆ ಸರ್ಕಾರದ ಮಾರ್ಗಸೂಚಿ ಧೂಳಿಪಟ
ತಾಲೂಕುವಾರು ಮಾಹಿತಿ
ಶಿವಮೊಗ್ಗ: ತಾಲೂಕಿನ 40 ಪಂಚಾಯಿತಿಗಳಲ್ಲಿ 30 ಗ್ರಾಪಂಗಳ ಎಣಿಕೆ ಪೂರ್ಣಗೊಂಡು ಫಲಿತಾಂಶ ಕೂಡ ಪ್ರಕಟಿಸಲಾಗಿದೆ. 8 ಕ್ಷೇತ್ರಗಳ ಘೋಷಣೆ ಮಾಡಬೇಕಿದೆ. 2ರ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಭದ್ರಾವತಿ: ತಾಲೂಕಿನ 35 ಪಂಚಾಯಿತಿಗಳಲ್ಲಿ 33 ಗ್ರಾಪಂಗಳ ಎಣಿಕೆ ಪೂರ್ಣಗೊಂಡು ಫಲಿತಾಂಶ ಕೂಡ ಪ್ರಕಟಿಸಲಾಗಿದೆ. 1 ಕ್ಷೇತ್ರದ ಘೋಷಣೆ ಮಾಡಬೇಕಿದೆ. 1ರ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ತೀರ್ಥಹಳ್ಳಿ: ತಾಲೂಕಿನ 38 ಪಂಚಾಯಿತಿಗಳಲ್ಲಿ ಎಣಿಕೆ ಕಾರ್ಯ ಪೂರ್ಣಗೊಂಡಿದ್ದು, ಫಲಿತಾಂಶ ಘೋಷಿಸಲಾಗಿದೆ.
ಸಾಗರ: ತಾಲೂಕಿನ 35 ಪಂಚಾಯಿತಿಗಳಲ್ಲಿ 33 ಗ್ರಾಪಂಗಳ ಎಣಿಕೆ ಪೂರ್ಣಗೊಂಡು ಫಲಿತಾಂಶ ಕೂಡ ಪ್ರಕಟಿಸಲಾಗಿದೆ. 2 ಕ್ಷೇತ್ರದ ಘೋಷಣೆ ಮಾಡಬೇಕಿದೆ.
ಶಿಕಾರಿಪುರ: ತಾಲೂಕಿನ 39 ಪಂಚಾಯಿತಿಗಳಲ್ಲಿ 33 ಗ್ರಾಪಂಗಳ ಎಣಿಕೆ ಪೂರ್ಣಗೊಂಡು ಫಲಿತಾಂಶ ಕೂಡ ಪ್ರಕಟಿಸಲಾಗಿದೆ. 1 ಕ್ಷೇತ್ರದ ಘೋಷಣೆ ಮಾಡಬೇಕಿದೆ. 1ರ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಸೊರಬ: ತಾಲೂಕಿನ 27 ಪಂಚಾಯಿತಿಗಳಲ್ಲಿ 24 ಗ್ರಾಪಂಗಳ ಎಣಿಕೆ ಪೂರ್ಣಗೊಂಡು ಫಲಿತಾಂಶ ಕೂಡ ಪ್ರಕಟಿಸಲಾಗಿದೆ. 6 ಪಂಚಾಯಿತಿಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
ಹೊಸನಗರ: ತಾಲೂಕಿನ 30 ಪಂಚಾಯಿತಿಗಳಲ್ಲಿ ಎಲ್ಲ ಕ್ಷೇತ್ರಗಳ ಎಣಿಕೆ ಕಾರ್ಯ ಮುಗಿದಿದ್ದು, ಫಲಿತಾಂಶ ಕೂಡ ಘೋಷಿಸಲಾಗಿದೆ.