ತಂಗಿಯ ಸಾವಿಗೆ ರಿವೆಂಜ್, 7 ಜನ ಸೇರಿ ಮಾಡಿದ ಸ್ಕೇಚ್ ಏನು ಗೊತ್ತಾ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹರಿಗೆಯಲ್ಲಿ ಇತ್ತೀಚೆಗೆ ಯುವಕನೊಬ್ಬನ ಬರ್ಬರ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದೊಂದು ರಿವೆಂಜ್ ತೀರಿಸಿಕೊಳ್ಳಲು ನಡೆದ ಹತ್ಯೆ ಎಂಬುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ.
ಗೋಪಾಳದ ಕಾರ್ತಿಕ್(24) ಎಂಬಾತನನ್ನು ಮಂಗಳವಾರ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಗ್ರಾಮೀಣ ಪೊಲೀಸರಿಗೆ ಇದು ಪ್ರತಿಕಾರದ ಕೊಲೆ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರಕರಣದ ಮುಖ್ಯ ಆರೋಪಿ ಸಂತೋಷ್ ಸೇರಿ ಏಳು ಜನರನ್ನು ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಮಗನಿಲ್ಲದಾಗ ಸೊಸೆಯ ಮೇಲೆ ಅತ್ಯಾಚಾರ

ನಡೆದಿದ್ದೇನು?: ಸುಭಾಷನಗರದ ನಿವಾಸಿ ಸಂತೋಷ್ ಎಂಬಾತನ ತಂಗಿಯನ್ನು ಕಾರ್ತಿಕ್ ಪ್ರೀತಿಸುತ್ತಿದ್ದ. ಆದರೆ, ಇತ್ತೀಚೆಗೆ ಆಕೆಯನ್ನು ಬಿಟ್ಟು ಮನೆಯಲ್ಲಿ ನಿಶ್ಚಯಿಸಿದ ಯುವತಿಗೆ ಮದುವೆಯಾಗಲು ಮುಂದಾಗಿದ್ದ ಎನ್ನಲಾಗಿದೆ. ಜನವರಿಯಲ್ಲಿ ವಿವಾಹ ಕೂಡ ನಿಶ್ಚಯಿಸಲಾಗಿತ್ತು. ಆದರೆ, ಈ ಕುರಿತು ಪ್ರೇಯಸಿಯೊಂದಿಗೆ ಜಗಳ ಕೂಡ ಆಗಿದೆ ಎಂದು ತಿಳಿದುಬಂದಿದೆ. ಪ್ರಿಯಕರ ಮತ್ತೊಬ್ಬಳನ್ನು ಮದುವೆಯಾಗುತ್ತಿರುವುದರಿಂದ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆಕೆಯ ಅಣ್ಣ ಸಂತೋಷ್, ಕೊಲೆಗೆ ಸ್ಕೆಚ್ ಹಾಕಿದ್ದಾನೆ.

ಪಕ್ಕಾ ಸ್ಕೆಚ್: ಮೃತಪಟ್ಟವಳ ಕಾರ್ಯವಿದ್ದು ಬರುವಂತೆ ಸಂತೋಷ್ ತಂಗಿಯ ಪ್ರಿಯಕರ ಕಾರ್ತಿಕ್ ಎಂಬಾತನಿಗೆ ಕರೆದಿದ್ದಾನೆ. ಬರುವಾಗಲೇ ಕೆಇಬಿ ಕ್ವಾರ್ಟರ್ಸ್ ಬಳಿಯ ನಿರ್ಜನ ಪ್ರದೇಶದಲ್ಲಿ ಸಂತೋಷ್ ಮತ್ತವನ ಸ್ನೇಹಿತರು ಕೊಲೆ ಮಾಡಿದ್ದಾರೆ.

ಆರೋಪಿಗಳು: ಆರೋಪಿಗಳೆಲ್ಲ ಸುಭಾಷನಗರದವರಾಗಿದ್ದಾರೆ. ಇದರಲ್ಲಿ ಕೆಲವರು ಕೂಲಿ ಕೆಲಸ, ಪೇಂಟಿಂಗ್ ವೃತ್ತಿ, ಗಾರ್ಮೆಂಟ್ಸ್‍ನಲ್ಲಿ ಕೆಲಸ, ಬಾರ್ ಬೆಂಡಿಂಗ್, ಡ್ರೈವಿಂಗ್ ವೃತ್ತಿ ಮಾಡುತ್ತಾರೆ. ಪ್ರಕರಣದ ಆರೋಪಿಗಳಾದ ಸಂತೋಷ್ (24), ಶಿವಕುಮಾರ್ (24), ಶರತ್(26), ಕಿರಣ್ ಕುಮಾರ್(21), ಮಂಜುನಾಥ್(26), ಕರಣ್ (25), ಕೃಷ್ಣಮೂರ್ತಿ (23) ಎಂಬುವವರನ್ನು ಬಂಧಿಸಲಾಗಿದೆ.

error: Content is protected !!