ಸುದ್ದಿ ಕಣಜ.ಕಾಂ
ಶಿವಮೊಗ್ಗ: ದ್ವಿತೀಯ ಪಿಯು ಮತ್ತು ಪದವಿ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿ ಪಡೆದು ಅದರಲ್ಲಿ ಮತದಾರರ ಪಟ್ಟಿಯಲ್ಲಿ ಇನ್ನೂ ಸೇರ್ಪಡೆಗೊಳ್ಳದಿರುವ ವಿದ್ಯಾರ್ಥಿಗಳನ್ನು ಗುರುತಿಸಬೇಕು ಎಂದು ಶಿವಮೊಗ್ಗ ಜಿಲ್ಲೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ವೀಕ್ಷಕ ಉಜ್ವಲ್ ಕುಮಾರ್ ಘೋಷ್ ನಿರ್ದೇಶಿಸಿದರು.
ಮತದಾರರ ಪಟ್ಟಿಗೆ ಸೇರಲು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು ಆಯಾ ಮತಗಟ್ಟೆ ಅಧಿಕಾರಿಗೆ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಕ್ರಮಕೈಗೊಳ್ಳಬೇಕು. ವಿದ್ಯಾರ್ಥಿಗಳು ಹೆಸರು ನೋಂದಾಯಿಸಲು ಅನುಕೂಲವಾಗುವಂತೆ ಅರ್ಜಿ ನಮೂನೆ-6 ಎಲ್ಲ ಕಾಲೇಜುಗಳಲ್ಲಿ ಲಭ್ಯ ಇರಬೇಕು ಎಂದು ಸೂಚಿಸಿದರು.
ಪೊಲೀಸ್ ಇಲಾಖೆ ನಡೆಸಲಿದೆ ಪರೀಕ್ಷೆ, ಈ ವೆಬ್ ಸೈನ್ನಲ್ಲಿ ಸಿಗಲಿದೆ ಹಾಲ್ ಟಿಕೆಟ್
ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲ ಅರ್ಹ ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಲು ಕ್ರಮ ಕೈಗೊಳ್ಳಬೇಕು. ಕೋವಿಡ್ನಿಂದಾಗಿ ಕಾಲೇಜುಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಶುರುವಾಗಿಲ್ಲ. ಹೀಗಾಗಿ, ವಿದ್ಯಾರ್ಥಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಶಿವಮೊಗ್ಗ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್ ಉಪಸ್ಥಿತರಿದ್ದರು.
- 18-19ರ ವಯೋಮಾನದ 17,088
- 20-29ರ ವಯೋಮಾನದ 2,87,501
- 30-29ರ ವಯೋಮಾನದ 3,49,300
- 40-49 ವಯೋಮಾನದ 3,11,659
- 50-59 ವಯೋಮಾನದ 2,44,584
- 60-69 ವಯೋಮಾನದ 1,52,855
- 70-79 ವಯೋಮಾನದ 71,671
- 80-89 ವಯೋಮಾನದ 22,458
- 90-99 ವಯೋಮಾನದ 4,071
- 100ವರ್ಷ ದಾಟಿದ 199 ಮತದಾರರು
ಅಂದಾಜು 18,73,978 ಜನಸಂಖ್ಯೆಯಿದ್ದು, 2020ರ ಅಂತಿಮ ಮತದಾರರ ಪಟ್ಟಿ ಪ್ರಕಾರ 14,47,314 ಮತದಾರರು ಇದ್ದಾರೆ. ಇವರಲ್ಲಿ 7,19,288 ಪುರುಷ ಹಾಗೂ 728026 ಮಹಿಳಾ ಮತದಾರರಿದ್ದಾರೆ. ಲಿಂಗಾನುಪಾತ ಸರಾಸರಿ ಒಂದು ಸಾವಿರ ಪುರುಷ ಮತದಾರರಿಗೆ 1011 ಮಹಿಳಾ ಮತದಾರರು ಇದ್ದಾರೆ. 2021ರ ಕರಡು ಮತದಾರರ ಪಟ್ಟಿ ಪ್ರಕಾರ 14,54,201 ಮತದಾರರು
ಇದ್ದಾರೆ.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ