ಇಂದು ಎಪಿಎಂಸಿ ಬಂದ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಭಾರತ್ ಬಂದ್ ಹಿನ್ನೆಲೆ ಮಂಗಳವಾರ ಎಪಿಎಂಸಿ ಬಂದ್ ಇರಲಿದೆ. ರೈತರ ಹೋರಾಟಕ್ಕೆ ಬೆಂಬಲ ನೀಡುವ ಉದ್ದೇಶದಿಂದ ಎಪಿಎಂಸಿ ತರಕಾರಿ ಮಾರುಕಟ್ಟೆ ವಹಿವಾಟು ಸ್ಥಗಿತಗೊಳಿಸಲಾಗಿದೆ. ಜನರು ಸಹಕರಿಸುವಂತೆ ವರ್ತಕರ ಸಂಘದ ಅಧ್ಯಕ್ಷ ಎನ್.ರಮೇಶ್, ಪ್ರದಾನ ಕಾರ್ಯದರ್ಶಿ ಎಚ್.ಎನ್. ನಾಗೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ನೀತಿ ವಿರುದ್ಧ ಸಿಡಿದೆದ್ದಿರುವ ರೈ ಸಮೂಹ ಡಿಸೆಂಬರ್ 8ರಂದು ಭಾರತ್ ಬಂದ್ ಗೆ ಕರೆ ನೀಡಿದ್ದು, ಹೋರಾಟಕ್ಕೆ ವರ್ತಕರ ಸಂಘ, ಜಿಲ್ಲಾ ಕಾಂಗ್ರೆಸ್ ಕೂಡ ಸಹಕಾರ ನೀಡಿದೆ.

ಯಾವುದೇ ಸಂಘ, ಸಂಸ್ಥೆಗಳು ಇದುವರೆಗೆ ಪ್ರತಿಭಟನೆ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿಲ್ಲ.
– ಕೆ.ಬಿ.ಶಿವಕುಮಾರ್, ಡಿಸಿ

error: Content is protected !!