ಕಲಾವಿದರಿಗೆ ಧನಸಹಾಯ, ಅಂತಿಮ ದಿನಾಂಕ ತಿಳಿದುಕೊಳ್ಳಲು ಕ್ಲಿಕ್ಕಿಸಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: 2020-21ನೇ ಸಾಲಿನ ಸಾಮಾನ್ಯ, ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆ ಅಡಿ ಧನಸಹಾಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಣೆ ತಿಳಿಸಿದೆ.

ಶಿವಮೊಗ್ಗ ನಗರಿಗರಿಗೆ ಪಾಲಿಕೆ ಶಾಕ್

ಯಾವುದಕ್ಕೆ ಧನಸಹಾಯ

  • ಕನ್ನಡ ಭಾಷೆ, ಸಾಹಿತ್ಯ, ಸಂಗೀತ ನೃತ್ಯ, ಜಾನಪದ, ನಾಟಕ ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ ಸೃಜನಶೀಲ ಕಲಾ ಪ್ರಕಾರಗಳಲ್ಲಿ ನಿರಂತರ ಸಾಂಸ್ಕøತಿಕ ಚಟುವಟಿಕೆಗಳ್ನು ನಡೆಸುತ್ತಿರುವ ಸಂಘ, ಸಂಸ್ಥೆಗಳಿಗೆ ಪ್ರೋತ್ಸಾಹ ರೂಪದಲ್ಲಿ ಧನ ಸಹಾಯ ನೀಡಲಾಗುವುದು.
  • ಅಸಂಘಟಿತ ತಂಡಗಳು, ಏಕವ್ಯಕ್ತಿ ಕಲಾವಿದರಿಗೆ ವಾದ್ಯಪರಿಕರ, ವೇದಭೂಷಣ ಖರೀದಿ
  • ಚಿತ್ರಕಲೆ ಮತ್ತು ಶಿಲ್ಪಕಲೆಗಳ ಏಕವ್ಯಕ್ತಿ, ತಂಡದ ಕಲಾವಿದರಿಗೆ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಲು

ಈ ಯೋಜನೆಗಳಿಗಾಗಿ ಧನ ಸಹಾಯ ಪಡೆಯಲು ಸೇವಾಸಿಂಧು ಪೋರ್ಟಲ್ http://sevasindhu.karnataka.gov.in ಮುಖಾಂತರ ಡಿಸೆಂಬರ್ 27ಒಳಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ 080 22230282, 080 2227954 ದೂರವಾಣಿ ಸಂಖ್ಯೆಗಳಿಗೆ ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಸಂಪರ್ಕಿಸಬಹುದು.

error: Content is protected !!