ಸುದ್ದಿ ಕಣಜ.ಕಾಂ
ಶಿವಮೊಗ್ಗ: ದಿನೇ ದಿನೆ ಕೋವಿಡ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದೆ. ಭಾನುವಾರ ಹೊಸದಾಗಿ 18 ಜನರಲ್ಲಿ ಸೋಂಕು ದೃಢಪಟ್ಟಿದೆ. ಇದುವರೆಗೆ 7200 ಕಂಟೈನ್ಮೆಂಟ್ ಜೋನ್ ಗುರುತಿಸಿದ್ದು, ಅದರಲ್ಲಿ 6689 ಕೈಬಿಡಲಾಗಿದೆ. ಹೀಗಾಗಿ, ಪ್ರಸಕ್ತ 511 ಜೋನ್ ಉಳಿದುಕೊಂಡಿವೆ.
ಮಾದರಿ ಸಂಗ್ರಹಿಸುವ ಕಾರ್ಯ ಚಾಲ್ತಿಯಲ್ಲಿದ್ದು, ಇಂದು 249 ಜನರಿಂದ ಸ್ಯಾಂಪಲ್ ಪಡೆಯಲಾಗಿದೆ. 1068 ಜನರ ವರದಿ ನೆಗೆಟಿವ್ ಬಂದಿದೆ. ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ 47 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸೋಂಕಿತರ ಸಂಖ್ಯೆ ಎಂಟಕ್ಕೆ ಇಳಿಕೆಯಾಗಿದೆ. 71 ಜನ ಮನೆಯ ಆರೈಕೆಯಲ್ಲಿದ್ದಾರೆ. ಪ್ರಸಕ್ತ 126 ಸಕ್ರಿಯ ಪ್ರಕರಣಗಳು ಶಿವಮೊಗ್ಗದಲ್ಲಿವೆ.
ತಾಲೂಕುವಾರು ವರದಿ: ಶಿವಮೊಗ್ಗ 8, ಭದ್ರಾವತಿ 7, ಶಿಕಾರಿಪುರ 1, ತೀರ್ಥಹಳ್ಳಿ 0, ಸೊರಬ 1, ಸಾಗರ 1, ಹೊಸನಗರ 1.