ಬಾಲ ಬಿಚ್ಚಿದರೆ ಬಾಲ, ತಲೆ ಕಟ್, ಪಿಎಫ್‍ಐ ವಿರುದ್ಧ ಸಿಟಿ ರವಿ ಗುಟುರ್

 

 

ಸುದ್ದಿ ಕಣಜ.ಕಾಂ
ಚಿಕ್ಕಮಗಳೂರು: ಪಿಎಫ್‍ಐ ಕಾರ್ಯಕರ್ತರು ಬಾಲ ಬಿಚ್ಚಿದರೆ ಬಾಲನೂ ಕಟ್, ತಲೆನೂ ಕಟ್ ಮಾಡಬೇಕಾಗುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಕಚೇರಿ ಮೇಲೆ ಪಿಎಫ್‍ಐ ಕಾರ್ಯಕರ್ತರ ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ । ನಾಗರ ಹಾವುಗಳ ಮಧ್ಯೆ ಘನಘೋರ ಕಾಳಗ! ಸೆರೆಯಾಯ್ತು ಅಪರೂಪದ ದೃಶ್ಯ

ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ತನಿಖೆ ಮಾಡಬೇಡ ಎನ್ನಲೂ ಪಿಎಫ್‍ಐ ಯಾರು ಎಂದು ಪ್ರಶ್ನಿಸಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುವುದು ಏಕೆ ಎಂದು ಖಾರವಾಗಿ ಕೇಳಿದ್ದಾರೆ. ಭಾರತ ಇರುವುದು ಭಯೋತ್ಪಾದನೆ ಮಾಡಲು ಅಲ್ಲ. ಭಯೋತ್ಪಾದನೆಗೆ ವಿದೇಶದಿಂದ ಹಣ ಬರುವುದನ್ನು ತಡೆಯಲು ತನಿಖೆ ನೆಡೆಯಬೇಕಿದೆ ಎಂದಿದ್ದಾರೆ.

error: Content is protected !!