ಸುದ್ದಿ ಕಣಜ.ಕಾಂ
ಶಿವಮೊಗ್ಗ: ಗ್ರಾಮ ಪಂಚಾಯಿತಿ ಚುನಾವಣೆಯ ಅಖಾಡ ರಂಗೇರಿದೆ. ಸೋಮವಾರದಿಂದ ಮೊದಲನೇ ಹಂತದಲ್ಲಿ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಶುರುವಾಗಿದ್ದು, ಒಟ್ಟು 91 ನಾಮಪತ್ರಗಳನ್ನು ಸಲ್ಲಿಸಲಾಗಿದೆ.
27 ಗ್ರಾಮ ಪಂಚಾಯಿತಿಗಳಲ್ಲಿ ಚುನಾವಣೆ ನಡೆಯಲ್ಲ, ಯಾವ ಪಂಚಾಯಿತಿ, ಕಾರಣವೇನು?
ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿ ಚುನಾವಣೆ ಕಳೆಗಟ್ಟಿದ್ದು, ಅಭ್ಯರ್ಥಿಗಳು ಅಖಾಡಕ್ಕೆ ಸಿದ್ಧತೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆಯೊಂದಿಗೆ ಮತದಾರರ ಮನವೋಲೈಸುವ ಕಾರ್ಯ ಕೂಡ ಆರಂಭಿಸಲಾಗಿದೆ.
ಗ್ರಾಮ ಪಂಚಾಯಿತಿ ವೇಳಾಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಕ್ಷೇತ್ರವಾರು ನಾಮಪತ್ರ: ಶಿವಮೊಗ್ಗದಲ್ಲಿ 53, ಭದ್ರಾವತಿಯಲ್ಲಿ 22 ಮತ್ತು ತೀರ್ಥಹಳ್ಳಿಯಲ್ಲಿ 16 ನಾಮಪತ್ರಗಳನ್ನು ಅಭ್ಯರ್ಥಿಗಳು ಸಲ್ಲಿಸಿದ್ದಾರೆ.
ಶಿವಮೊಗ್ಗ, ಭದ್ರಾವತಿ ಮತ್ತು ತೀರ್ಥಹಳ್ಳಿ ಸೇರಿ ಒಟ್ಟು 113 ಗ್ರಾಮ ಪಂಚಾಯಿತಿಯ ಒಟ್ಟು 1212 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.