ಸುದ್ದಿ ಕಣಜ.ಕಾಂ ಶಿವಮೊಗ್ಗ: ತುಂಗಾ ಕಾಲುವೆಯ ಎರಡೂ ಬದಿಯಲ್ಲಿ ಗಿಡಗಳನ್ನು ನೆಡುವ ಯೋಜನೆ ಇದೆ. ಈ ಬಗ್ಗೆ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ನಗರಾಭಿವೃದ್ಧಿ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ನಗರದ ಈಶ್ವರವನಕ್ಕೆ ಮಂಗಳವಾರ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಗೆ ಒಳಪಡುವ ತುಂಗಾ ಕಾಲುವೆಯ 13 ಕಿಲೋ ಮೀಟರ್ ಪ್ರದೇಶದ ಎರಡೂ ಬದಿ ಗಿಡಗಳನ್ನು ನೆಟ್ಟು ಹಸಿರು ಪರಿಸರ ನಿರ್ಮಾಣ ಮಾಡಲಾಗುವುದು. ಇದರಿಂದ ಭೂ ಒತ್ತುವರಿ ನಿಯಂತ್ರಣ, ಪ್ರದೇಶ ಸದ್ವಳಕೆ ಕೂಡ ಆಗಲಿದೆ ಎಂದು ತಿಳಿಸಿದರು.
ಎಷ್ಟು ಅನುದಾನ: ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯ ಆಯುಕ್ತರು ಇಲಾಖೆಯ ಮುಖ್ಯಸ್ಥರನ್ನು ಬೆಂಗಳೂರಿನಲ್ಲಿ ಸಂಪರ್ಕಿಸಿದ್ದಾರೆ. ಅಂದಾಜು 12.50 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಒಟ್ಟು 70,000 ಗಿಡ ನಡೆಲಾಗುವುದು ಎಂದು ಈಶ್ವರಪ್ಪ ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 8,600 ಪ್ಲಾಂಟೇಶನ್: ಪಾಲಿಕೆ ವ್ಯಾಪ್ತಿಗೆ ಒಳಪಡುವ ಏಳೆಂಟು ಪ್ರದೇಶಗಳಲ್ಲಿ 8600 ಗಿಡ ನೆಡಲಾಗುವುದು. ಈ ಯೋಜನೆ ಟೆಂಡರ್ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು. ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ್ ವಟಾರೆ, ನಿವೃತ್ತ ಉಪನ್ಯಾಸಕ ಬಿ.ಎಂ.ಕುಮಾರಸ್ವಾಮಿ, ಅಶೋಕ್ ಕುಮಾರ್, ಶಿವಮೊಗ್ಗ ನಂದನ್ ಉಪಸ್ಥಿತರಿದ್ದರು.
ಸುದ್ದಿ ಕಣಜ.ಕಾಂ ಬೆಂಗಳೂರು: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ರಾಜ್ಯ ಸರ್ಕಾರ ಅಸ್ತು ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ. ಇತ್ತೀಚೆಗೆ, […]
ಸುದ್ದಿ ಕಣಜ.ಕಾಂ | DISTRICT | RAJYOTSAVA AWARD ಶಿವಮೊಗ್ಗ: ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿಟ್ಟ ಗೋಪಾಲಾಚಾರ್ಯ, ಯೋಗವನ್ನೇ ಜೀವನವಾಗಿಸಿಕೊಂಡಿರುವ ಭ.ಮ. ಶ್ರೀಕಂಠ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಉನ್ನತಿಯನ್ನು ಸಾಧಿಸಿದ ಪ್ರೊ.ಕೃಷ್ಣಭಟ್ಟ ಹಾಗೂ ಜಾನಪದಕ್ಕಾಗಿಯೇ […]
ಸುದ್ದಿ ಕಣಜ.ಕಾಂ ಶಿವಮೊಗ್ಗ: ಬೊಮ್ಮನಕಟ್ಟೆ ಎಫ್ ಬ್ಲಾಕ್ನಲ್ಲಿ ಬುಧವಾರ ಬೆಳಗ್ಗೆಯಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಒತ್ತುವರಿ ಮಾಡಲಾಗಿರುವ ಉದ್ಯಾನ, ಸಾರ್ವಜನಿಕ ಉಪಯೋಗಕ್ಕೆ ಪ್ರದೇಶ (ಸಿಎ ಸೈಟ್), ರಸ್ತೆಗಳನ್ನು ತೆರವುಗೊಳಿಸುವ […]