ಪೊಲೀಸ್ ಇಲಾಖೆ ನಡೆಸಲಿದೆ ಪರೀಕ್ಷೆ, ಈ ವೆಬ್ ಸೈನ್‍ನಲ್ಲಿ ಸಿಗಲಿದೆ ಹಾಲ್ ಟಿಕೆಟ್

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯಲ್ಲಿ ಖಾಲಿ ಇರುವ ಒಟ್ಟು 50 ನಾಗರೀಕ ಪೊಲೀಸ್ ಕಾನ್ಸ್‍ಟೇಬಲ್ ಹುದ್ದೆಗಳ ನೇಮಕಾತಿ ಸಂಬಂಧ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 17ರಂದು ಪೊಲೀಸ್ ಇಲಾಖೆ ನಡೆಸಲಿದೆ ಎಂದು ಎಸ್.ಪಿ. ಕೆ.ಎಂ.ಶಾಂತರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ 1:5ರ ಅನುಪಾತದಲ್ಲಿ ಅರ್ಹ 250 ಅಭ್ಯರ್ಥಿಗಳಿಗೆ ಡಿಸೆಂಬರ್ 17 ರಂದು ಬೆಳಗ್ಗೆ 7ರಿಂದ ಮುಕ್ತಾಯಗೊಳ್ಳುವವರಿಗೆ ನಗರದ ನೆಹರೂ ಕ್ರೀಡಾಂಗಣದಲ್ಲಿ ಇಟಿ ಮತ್ತು ಪಿಎಸ್‍ಟಿ ಪರೀಕ್ಷೆ ಏರ್ಪಡಿಸಲಾಗಿದೆ.
ಅರ್ಹ ಅಭ್ಯರ್ಥಿಗಳು ಇಟಿ, ಪಿಎಸ್‍ಟಿ, ಕರೆ ಪತ್ರಗಳನ್ನು http://www.ksp.gov.in ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಅಗತ್ಯ ದಾಖಲಾತಿ ಹಾಗೂ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಹಾಜರಾಗುವಂತೆ ತಿಳಿಸಿದ್ದಾರೆ.

error: Content is protected !!