ಎನ್‍ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೆ ಪ್ರಾಮಾಣಿಕ ಪ್ರಯತ್ನ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರದಲ್ಲಿ ನೂತನ ಗುರುಭವನ ನಿರ್ಮಾಣ, ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಎನ್‍ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸುವುದು ಎಂದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷ ಡಿ.ಬಿ.ರುದ್ರಪ್ಪ ಭರವಸೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ 5 ವರ್ಷಗಳಲ್ಲಿ ಶಿಕ್ಷಕ ವರ್ಗದ ಅಭ್ಯುದಯಕ್ಕೆ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳನ್ನು ತಿಳಿಸಿದರು.
ಆಶ್ವಾಸನೆ

  • ಸಿ ಆಂಡ್ ಆರ್ ತಿದ್ದುಪಡಿ ಮಾಡಿ ವೃತ್ತಿನಿರತ ಪದವೀಧರ ಶಿಕ್ಷರಿಗೆ ನ್ಯಾಯ ಒದಗಿಸುವುದು
  • ಶಿಕ್ಷಕರ ಕುಟುಂಬಗಳಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಜಾರಿಗೊಳಿಸುವುದು
  • ಕೇಂದ್ರಕ್ಕೆ ಸಮಾನವಾದ ವೇತನ ಭತ್ಯೆ ಮಂಜೂರು ಮಾಡಿಸುವುದು
  • ಶಿಕ್ಷಕರ ಸ್ನೇಹಿ ವರ್ಗಾವಣೆ ಕಾಯ್ದೆ ಜಾರಿಗೊಳಿಸುವುದು
  • ತರಗತಿಗೊಬ್ಬ ಶಿಕ್ಷಕರ ನೇಮಕಕ್ಕೆ ಅಗತ್ಯ ಕ್ರಮಕೈಗೊಳ್ಳುವುದು

ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಅಧ್ಯಕ್ಷ ಎಂ.ರವಿ, ಶಿಕ್ಷಕರು ಎದುರಿಸುತ್ತಿರುವ ಪ್ರತಿಯೊಂದು ಸಮಸ್ಯೆ, ಎಡರು ತೊಡರುಗಳನ್ನು ನಿವಾರಿಸಲಾಗುವುದು. ಪ್ರತಿ ಸಮಸ್ಯೆಗೆ ತುರ್ತು ಸ್ಪಂದನೆ ನೀಡಲಾಗುವುದು. ಜತೆಗೆ, ತಾಲ್ಲೂಕಿನಲ್ಲಿ ಪ್ರತಿ ವರ್ಷ ಶೈಕ್ಷಣಿಕ ಸಮ್ಮೇಳನ ಆಯೋಜಿಸಿ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಯಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಶಾಂತರಾಜ್, ಜಿಲ್ಲಾ ಸಂಘದ ಪದಾಧಿಕಾರಿಗಳಾದ ಸುಮತಿ, ಶ್ರೀಧರ್ ಗೌಡ, ಪ್ರಕಾಶ್, ಚೈತ್ರ, ಶಿವಕುಮಾರ್, ಗಣೇಶ್, ಅನುಪಮಾ, ಮಂಜುನಾಥ್, ತಾಲ್ಲೂಕು ಸಂಘದ ಪದಾಧಿಕಾರಿಗಳ ಎಂ.ಜಯ, ಆನಂದಪ್ಪ, ಎ.ಕೆ.ನಾಗರಾಜ್, ಎಂ.ಕೆ.ವಾಣಿ, ಜಿ.ರವಿ, ಎಸ್.ಕೆ.ಅನಿತಾ ಕುಮಾರಿ, ಎಂ.ಶೈಲಶ್ರೀ ಉಪಸ್ಥಿತರಿದ್ದರು.

error: Content is protected !!