ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಕಳೆದ ನಾಲ್ಕು ವರ್ಷಗಳ ಹಿಂದೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಬೈಕ್ ಕಳ್ಳತನ, 2020ರಲ್ಲಿ ಶಿರಾಳಕೊಪ್ಪ ಠಾಣೆ ವ್ಯಾಪ್ತಿಯಲ್ಲಿ ನಾಲ್ಕು ಬೈಕ್ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ | ಮಲ್ಲ ಮೂವಿಯಲ್ಲಿ ಮಿಂಚಿದ್ದ ಆನೆಯ ಆರ್ಭಟ, ಸಕ್ರೆಬೈಲಲ್ಲಿ ಕೆಲಹೊತ್ತು ಆತಂಕ
ಶಿರಾಳಕೊಪ್ಪ ಪಟ್ಟಣದ ನಿವಾಸಿಗಳಾದ 30 ವರ್ಷದ ದಾದಾಫೀರ್ ಮತ್ತು 27 ವರ್ಷದ ಜಮೀರ್ ಅಹಮದ್ ಎಂಬುವವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳಿಂದ ಅಂದಾಜು 3 ಲಕ್ಷ ರೂ. ಮೌಲ್ಯದ ಏಳು ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆ ನಡೆಸಿದವರು: ಶಿಕಾರಿಪುರ ಡಿವೈಎಸ್ಪಿ ವಿನಾಯಕ ಶೆಟಗೇರಿ ಅವರ ಮಾರ್ಗದರ್ಶನದಲ್ಲಿ ಶಿಕಾರಿಪುರದ ಸಿಪಿಐ ಗುರುರಾಜ್ ಎನ್.ಮೈಲಾರ್ ನೇತೃತ್ವದಲ್ಲಿ ಶಿರಾಳಕೊಪ್ಪ ಪಿಎಸ್ಐ ರಮೇಶ್, ಸಿಬ್ಬಂದಿಯಾದ ಕೊಟ್ರೇಶ್, ಸಂಜೀವ್, ಮಧುಸೂದನ್, ಮಂಜುನಾಥ್, ಬಸವಕುಮಾರ್ ಕಾರ್ಯಾಚರಣೆ ನಡೆಸಿದ್ದಾರೆ.
ಎಲ್ಲೆಲ್ಲಿ ಪ್ರಕರಣ: ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ 2020ನೇ ಸಾಲಿನಲ್ಲಿ 4, 2017ರಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 1 ದ್ವಿ ಚಕ್ರ ವಾಹನ ಹಾಗೂ ಇತರೆ 2 ದ್ವಿ ಚಕ್ರ ವಾಹನ ಸೇರಿದಂತೆ ಒಟ್ಟು 7 ದ್ವಿ ಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.