ಸುದ್ದಿ ಕಣಜ.ಕಾಂ
ಶಿವಮೊಗ್ಗ: ರಾಷ್ಟ್ರೀಯ ಪಲ್ಸ್ ಪೊಲಿಯೊ ಕಾರ್ಯಕ್ರಮದ ಪ್ರಯುಕ್ತ ಜನವರಿ 17ರಂದು ನಡೆಯಬೇಕಿದ್ದ ಲಸಿಕೆ ಅಭಿಯಾನವನ್ನು ಜನವರಿ 31ಕ್ಕೆ ಮುಂದೂಡಲಾಗಿದೆ. ಅಂದು ಬೆಳಗ್ಗೆ 8ರಿಂದ ಸಂಜೆ 5 ಗಂಟೆಯವರಿಗೆ ಪೊಲಿಯೊ ಹನಿ ಹಾಕಲಾಗುವುದು.
ಕೋವಿಡ್ ಲಸಿಕೆ ಲಾಂಚ್ ಆದ ಪರಿಣಾಮ ಉದ್ದೇಶಿತ ಪೊಲಿಯೊ ಅಭಿಯಾನವನ್ನು ಮುಂದೂಡಲಾಗಿದೆ. 31ರಂದು ಬೂತ್ ಗಳಲ್ಲಿ ಲಸಿಕೆ ನೀಡಲಾಗುವುದು. ಒಂದುವೇಳೆ, ಅಲ್ಲಿ ಗೈರಾದ ಮಕ್ಕಳಿಗೆ ಪೊಲಿಯೊ ನೀಡುವ ಉದ್ದೇಶದಿಂದ ಫೆಬ್ರುವರಿ 1 ರಿಂದ 3ರ ವರೆಗೆ ನಗರ ಪ್ರದೇಶ ಹಾಗೂ ಫೆಬ್ರವರಿ 1 ಮತ್ತು 2ರಂದು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆ ಭೇಟಿ ಇರುತ್ತದೆ.
ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಲಿದ್ದಾರೆ.