ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆಪಿಟಿಸಿಎಲ್ ಅಪ್ರೆಂಟೀಸ್ ಹುದ್ದೆಗಳ ಭರ್ತಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಗ್ರ್ಯಾಜುಯೇಟ್ ಮತ್ತು ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟೀಸ್ ನೇಮಕಾತಿ ನಡೆಯಲಿದ್ದು, ಅರ್ಹರು ಜನವರಿ 22ರೊಳಗೆ ಅರ್ಜಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಜನವರಿ 4ರಿಂದ ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಾರ್ಟ್ ಲಿಸ್ಟ್ ವಿದ್ಯಾರ್ಥಿಗಳ ಪಟ್ಟಿ ಜನವರಿ 27ರಂದು ಬಿಡುಗಡೆ ಮಾಡಲಾಗುವುದು. ಮೂಲ ದಾಖಲೆಗಳ ಪರಿಶೀಲನೆ ಫೆಬ್ರವರಿ 3ರಿಂದ 6ರ ವರೆಗೆ ನಡೆಯಲಿದೆ.
ಯಾವ ಹುದ್ದೆಗಳು ಎಷ್ಟು?
ಗ್ರ್ಯಾಜುಯೇಟ್ ಅಪ್ರೆಂಟೀಸ್ | ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ 100, ಸಿವಿಲ್ ಎಂಜಿನಿಯರ್ 25 ಹುದ್ದೆಗಳು | ತರೆಬೇತಿ ಅವಧಿ ಒಂದು ವರ್ಷ | ಮಾಸಿಕ ಸ್ಟೈಫಂಡ್ 7000 ರೂಪಾಯಿ
ಟೆಕ್ನಿಷಿಯನ್ (ಡಿಪ್ಲೋಮಾ) ಅಪ್ರೆಂಟೀಸ್ | ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ 60, ಸಿವಿಲ್ ಎಂಜಿನಿಯರ್ 15 | ತರಬೇತಿ ಅವಧಿ 1 ವರ್ಷ | 5000 ರೂಪಾಯಿ
ವಿದ್ಯಾರ್ಹತೆ | ಡಿಪ್ಲೋಮಾ ಮತ್ತು ಎಂಜಿನಿಯರಿಂಗ್ ಪದವಿ (2018, 2019 ಮತ್ತು 2020)