ಸುದ್ದಿ ಕಣಜ.ಕಾಂ
ಬೆಂಗಳೂರು: ಗೋವಾದಲ್ಲಿ ಜನವರಿ 24ರ ವರೆಗೆ ನಡೆಯಲಿರುವ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ.
ಚಿತ್ರರಂಗದಲ್ಲಿ 25 ವರ್ಷಗಳನ್ನು ಗತಿಸಿರುವ ಈ ಸುಸಂದರ್ಭದಲ್ಲಿ ಅವರಿಗೆ ಗೋವಾದಲ್ಲಿ ಅಭಿನಂದನೆ ಕೂಡ ಹೇಳಲಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಬಾಲಿವುಡ್ ಬ್ಯೂಟಿ ‘ಜಾಕ್ವೆಲಿನ್’, ಭೇಟಿಗೆ ಕಾರಣ ಇಲ್ಲಿದೆ…
ಗೋವಾದಲ್ಲೂ ಕಿಚ್ಚ ತನ್ನ ಖದರ್ ಬಿಟ್ಟಿಲ್ಲ. ಕನ್ನಡದ ಕಂಪನ್ನು ಕನ್ನಡ ನೆಲೆದಲ್ಲಿ ಮಾತ್ರವಲ್ಲದೇ ಗೋವಾದಲ್ಲೂ ಬೀರಿದ್ದಾರೆ. ಅವರು ಚಿತ್ರೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ `ಪ್ರತಿಯೊಬ್ಬರಿಗೆ ಕನ್ನಡ ಚಿತ್ರರಂಗದ ಪರವಾಗಿ ಕರ್ನಾಟಕದ ಪರವಾಗಿ ಈ ಕಿಚ್ಚನಿಂದ ನಮಸ್ತೆ…’ ಎಂದು ಕನ್ನಡದಲ್ಲಿಯೇ ಮಾತನಾಡುವ ಮೂಲಕ ಕನ್ನಡತನವನ್ನು ಸಾರಿದ್ದಾರೆ. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಈ ವೇಳೆ, ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಜನವರಿ 16ರ ರಿಂದ ಆರಂಭವಾಗಿರುವ ಚಿತ್ರೋತ್ಸವದಲ್ಲಿ ವಿವಿಧ ರಾಷ್ಟ್ರಗಳ ಒಟ್ಟು 224 ಸಿನಿಮಾಗಳು ಪ್ರದರ್ಶನ ಕಾಣಲಿವೆ.