ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕು ವ್ಯಾಪ್ತಿಯಲ್ಲಿ ಪರವಾನಗಿ ಪಡೆಯದೇ ನಕಲಿ ರಾಸಾಯನಿಕ ಗೊಬ್ಬರ ಮಾರಾಟ ಮಾಡುತ್ತಿರುವುದು ಅಥವಾ ನೇರವಾಗಿ ರೈತರ ಜಮೀನಿಗೆ ಪೂರೈಕೆ ಮಾಡುತ್ತಿದ್ದಲ್ಲಿ ತಕ್ಷಣ ದೂರು ನೀಡುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇಲ್ಲಿ ದೂರು ನೀಡಿ: ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಮಾಹಿತಿ ನೀಡತಕ್ಕದ್ದು.
ಇದನ್ನೂ ಓದಿ । ಸ್ವ ಉದ್ಯಮಕ್ಕೆ ಆತ್ಮ ನಿರ್ಭರ್ ಭಾರತ್ ಅಡಿ ಸಹಾಯ ಧನ, ಇಲ್ಲಿದೆ ಪೂರ್ಣ ಮಾಹಿತಿ
ಅಡ್ಡ ಪರಿಣಾಮವೇನು?: ನಕಲಿ ರಾಸಾಯನಿಕ ಗೊಬ್ಬರಗಳು ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ವಿಷ ಪೂರಿತವಾದ ರಾಸಾಯನಿಕಗಳನ್ನು ಒಳಗೊಂಡಿದ್ದು, ಇದನ್ನು ಬಳಸಿದರೆ ಭೂಮಿ ಮತ್ತು ಮನುಷ್ಯನ ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ರೈತರು ಯಾವುದೇ ಕಾರಣಕ್ಕೂ ಕಡಿಮೆ ದರದಲ್ಲಿ ಸಿಗುವ ಇಂತಹ ಗೊಬ್ಬರವನ್ನು ಬಳಸಬಾರದು ಎಂದು ಸಹಾಯಕ ಕೃಷಿ ನಿರ್ದೇಶಕರು ಎಚ್ಚರಿಸಿದ್ದಾರೆ.