ಸುದ್ದಿ ಕಣಜ.ಕಾಂ
ಶಿವಮೊಗ: ಭಾರತೀಯ ರಿಸರ್ವ್ ಬ್ಯಾಂಕ್ ನಲ್ಲಿ ಭದ್ರತಾ ಸಿಬ್ಬಂದಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಿದ್ದು, ಅರ್ಹ ಮಾಜಿ ಸೈನಿಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಹತಾ ಮಾನದಂಡ, ಖಾಲಿ ಹುದ್ದೆಗಳ ಮೀಸಲಾತಿ, ಆಯ್ಕೆಯ ಯೋಜನೆ, ಆನ್ಲೈನ್ ಅಪ್ಲಿಕೇಶನ್ ಮುಂತಾದ ಮಾಹಿತಿಗಾಗಿ ಜಾಲತಾಣ http://www.rbi.org.inನ್ನು ವೀಕ್ಷಿಸುವಂತೆ ಹಾಗೂ 2021ರ ಜನವರಿ 30ರ ಎಂಪ್ಲಾಯ್ಮೆಂಟ್ ನ್ಯೂಸ್, ರೋಜಗಾರ್ ಸಮಾಚಾರ್ ಪತ್ರಿಕೆಯನ್ನು ವೀಕ್ಷಿಸುವಂತೆ ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮಾಹಿತಿಗಾಗಿ ಉಪ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಶಿವಮೊಗ್ಗ, ದೂರವಾಣಿ ಸಂಖ್ಯೆ 08182-2200925ನ್ನು ಸಂಪರ್ಕಿಸಬಹುದು.