ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಕರ್ಷಕ ಮೈಮಾಟ, ಮಾದಕ ನಟನೆಯಿಂದ ಅಭಿಮಾನಿಗಳ ಮನಸ್ಸು ಗೆದ್ದಿರುವ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ!
ಜನವರಿ 15ರಿಂದ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ಕಿಮ್ಮನೆ ಗಾಲ್ಫ್ ರೆಸಾರ್ಟ್ ನಲ್ಲಿ ತಂಗಿದ್ದು, ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದ್ದಾರೆ.
ಸಹಜವಾಗಿಯೇ ಸಿನಿಮಾ ಮಂದಿ ಎಲ್ಲೇ ಹೋದರೂ ಅಭಿಮಾನಿಗಳಲ್ಲಿ ಕೌತುಕ ಹುಟ್ಟಿಕೊಳ್ಳುತ್ತದೆ. ಅದರ ಸುತ್ತ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಈಗಲೂ ಅದೇ ಆಗಿದೆ. ಶಿವಮೊಗ್ಗಕ್ಕೆ ಶ್ರೀಲಂಕಾ ಮೂಲದ ಬಾಲಿವುಡ್ನಟಿಯು ಚಿತ್ರೀಕರಣಕ್ಕೆ ಬಂದಿರಬಹುದೇ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿದೆ.
ಇದನ್ನೂ ಓದಿ । ಡಿಪ್ಲೋಮಾ, ಎಂಜಿನಿಯರಿಂಗ್ ವಿದ್ಯಾರ್ಹತೆ ಇದ್ದರೆ, ಕೆಪಿಟಿಸಿಎಲ್ ನಲ್ಲಿದೆ ಸುವರ್ಣ ಅವಕಾಶ
ಖಾಸಗಿ ಭೇಟಿಯೇ ವಿನಹ ಆಫಿಶಿಯಲ್ ಅಲ್ಲ: ಇದೇ ಮೊದಲ ಸಲ ಶಿವಮೊಗ್ಗದ ಐಷಾರಾಮಿ ಗಾಲ್ಫ್ ರೆಸಾರ್ಟ್ವೊಂದರಲ್ಲಿ ಜ್ಯಾಕ್ವಲಿನ್ ತಂಗಿದ್ದು, ಇದರ ಫೋಟೊಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಲಕ್ಷಾಂತರ ಅಭಿಮಾನಿಗಳು ಲೈಕ್ ಕೂಡ ಮಾಡಿದ್ದಾರೆ. ಪ್ರಕೃತಿ ಸೌಂದರ್ಯದ ಮಧ್ಯೆ ವೀಕೆಂಡ್ ಕಳೆಯುತ್ತಿದ್ದಾರೆ. ಶಿವಮೊಗ್ಗಕ್ಕೆ ಬಂದಿರುವ ಜ್ಯಾಕ್ ಇದು ಖಾಸಗಿ ಭೇಟಿ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ । ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸುವಂತೆ ಕಾಂಗ್ರೆಸ್ ಒತ್ತಾಯಿಸಿದ್ದೇಕೆ?,
ಚಂದನವನಕ್ಕೂ ಜ್ಯಾಕ್ ಲಗ್ಗೆ: ಶಿವಮೊಗ್ಗದವರೇ ಆದ ಕಿಚ್ಚ ಸುದೀಪ್ ಅಭಿನಯಿಸಿರುವ ಫ್ಯಾಂಟಮ್ ಚಿತ್ರದಲ್ಲೂ ಜ್ಯಾಕ್ವೆಲಿನ್ ನಟಿಸಲಿದ್ದಾರಂತೆ. ಇದರಲ್ಲಿಯ ವಿಶೇಷ ಹಾಡೊಂದಕ್ಕೆ ಖ್ಯಾತ ನಟಿಯ ಹುಡುಕಾಟದಲ್ಲಿದ್ದ ಚಿತ್ರ ತಂಡವು ಜ್ಯಾಕ್ ಅವರನ್ನು ಅಪ್ರೋಚ್ ಆಗಿರುವ ಬಗ್ಗೆಯೂ ಸುದ್ದಿಗಳು ಕೇಳಿಬರುತ್ತಿವೆ. ಇನ್ನೇನು ಜ್ಯಾಕ್ವೆಲಿನ್ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಬಹುತೇಕ ಈ ವಿಚಾರ ಪಕ್ಕಾ ಆಗಲಿದೆ.
ಬಿಜಿ ಶೆಡ್ಯೂಲ್ ನಡುವೆಯೂ ಮಲೆನಾಡಿಗೆ ನಟಿ: 2009ರಿಂದ ಬಾಲಿವುಡ್ ನಲ್ಲಿ ಸಕ್ರಿಯವಾಗಿರುವ ಜ್ಯಾಕ್ವೆಲಿನ್ ಫರ್ನಾಂಡಿಸ್ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅಟ್ಯಾಕ್, ಭೂತ್ ಪೊಲೀಸ್, ಸರ್ಕಸ್ ಮತ್ತು ಬಚ್ಚನ್ ಪಾಂಡೇ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಅದರ ಮಧ್ಯೆಯೂ ಶಿವಮೊಗ್ಗದಲ್ಲಿ ವೀಕೆಂಡ್ ಕಳೆಯುತ್ತಿದ್ದಾರೆ.