ರಾಡ್, ಗರಗಸ ಹಿಡಿದು ಕಾದಿದ್ದ ದರೋಡೆ ಗ್ಯಾಂಗ್ ಮೇಲೆ ಪೊಲೀಸ್ ವಶಕ್ಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹಾರ್ನಹಳ್ಳಿ ಕೆರೆ ಬಳಿ ದರೋಡೆಗೆ ಕಾದಿದ್ದ ಐವರ ಗ್ಯಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತರೆಲ್ಲರೂ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿಯವರಾಗಿದ್ದು, ರಾಡ್, ಗರಗಸ, ಖಾರದ ಪುಡಿಯೊಂದಿಗೆ ದರೋಡೆಗಾಗಿ ಕಾಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರು: ರತಿಕ್, ಆಂಜನಪ್ಪ, ಹನುಮಂತಪ್ಪ, ಧರ್ಮಪ್ಪ ಹಾಗೂ ಸಂತೋಷ್ ಎಂಬುವವರನ್ನು ಬಂಧಿಸಲಾಗಿದೆ.
ಕುಂಸಿ ಪೊಲೀಸ್ ಠಾಣೆ ಪಿಎಸ್.ಐ ನವೀನ್ ಮಠಪತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

 

error: Content is protected !!