ಶಾಲಾರಂಭದ ಮೊದಲ ದಿನ ಹೇಗಿತ್ತು, ಎಷ್ಟು ವಿದ್ಯಾರ್ಥಿಗಳು ಬಂದಿದ್ರು, ಏನೇನು ವ್ಯವಸ್ಥೆ ಮಾಡಲಾಗಿತ್ತು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೊರೊನಾ ಶಕೆ ಆರಂಭವಾಗಿದ್ದೇ ವಿದ್ಯಾರ್ಥಿಗಳು ಶಾಲೆಯ ಹಾದಿಯನ್ನೇ ಮರೆತಿದ್ದರು. ಅವರನ್ನು ಮರು ಹಳಿಗೆ ತಂದು ಶೈಕ್ಷಣಿಕ ಚಟುವಟಿಕೆ ಗರಿಗೆದರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲಿ

ವಿಡಿಯೋ ರಿಪೋರ್ಟ್

10ನೇ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ತರಗತಿ ಆರಂಭಿಸಲಾಗಿದೆ. ಜತೆಗೆ, 8 ಮತ್ತು 9ನೇಯವರಿಗೂ ವಿದ್ಯಾಗಮದಡಿ ಶಾಲೆಯಲ್ಲೇ ಮಧ್ಯಾಹ್ನ ತರಗತಿಗಳನ್ನು ನಡೆಸಲಾಗುತ್ತಿದೆ.
ಬಂದ ವಿದ್ಯಾರ್ಥಿಗಳು: ಶಿವಮೊಗ್ಗದಲ್ಲಿ 23 ಸಾವಿರಕ್ಕೂ ಅಧಿಕ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿದ್ದಾರೆ. ಅದರಲ್ಲಿ ಮೊದಲ ದಿನ ಶೇ.65ರಷ್ಟು ವಿದ್ಯಾರ್ಥಿಗಳು ಶಾಲೆಗೆ ಬಂದಿದ್ದರು. ಪಿಯುಸಿಯದ್ದೂ ಇದೇ ಸ್ಥಿತಿ ಇದೆ. ಒಪ್ಪಿಗೆ ಪತ್ರ ತರುವುದು ಕಡ್ಡಾಯಗೊಳಿಸಲಾಗಿದೆ.

error: Content is protected !!