ತಾಳಗುಂದ ಶಾಸನಕ್ಕೆ ಸಿಗಬೇಕಿದೆ ಆದ್ಯತೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಶ್ರೀಮಂತ ಇತಿಹಾಸ ಹೊಂದಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಶಾಸನಗಳು ಸಿಕ್ಕಿವೆ. ಅವುಗಳ ಬಗ್ಗೆ ಅಧ್ಯಯನ ನಡೆಯಬೇಕಾದ ಅಗತ್ಯತೆ ಇದೆ.
ಅದರಲ್ಲೂ ಕನ್ನಡದ ಮೊದಲ ಶಾಸನವಾದ ತಾಳಗುಂದಕ್ಕೆ ನ್ಯಾಯ ದೊರಕಿಸುವ ಕೊಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕಿದೆ ಎಂದು ಶಿವಮೊಗ್ಗ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ವಿಜಯಾದೇವಿ ಹೇಳಿದರು.

IMG 20210131 135845ಗೋಪಿಶೆಟ್ಟಿಕೊಪ್ಪ ಬಡಾವಣೆಯ ಸಾಹಿತ್ಯ ಗ್ರಾಮದಲ್ಲಿ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನಿಂದ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಸಮಗ್ರ ಸಾಂಸ್ಕøತಿಕ ಇತಿಹಾಸ ಪುನರ್ ರೂಪಿಸುವ ಅಗತ್ಯತೆ ಇದೆ. ಜಿಲ್ಲೆಯ ಏಳು ತಾಲೂಕಗಳಲ್ಲಿನ ಶಾಸನಗಳನ್ನು ಅಧ್ಯಯನ ನಡೆಸಬೇಕಿದೆ ಎಂದು ಹೇಳಿದರು.
ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ ತಿಳಿಸಿದ್ದ ಹಲ್ಮಿಡಿ ಶಾಸನಕ್ಕಿಂತ ಕನ್ನಡದ ಮೊದಲ ಶಾಸನ ಶಿವಮೊಗ್ಗದ ತಾಳಗುಂದದಲ್ಲಿ ದೊರೆತಿದೆ. 7ನೇ ಶತಮಾನದ ಭೂವಿಕ್ರಮನ ತಾಮ್ರ, ಚಿನ್ನದ ನಾಣ್ಯಗಳು ಸಹ ದೊರೆತಿವೆ. ಅಲ್ಲಮನ ಕುರಿತ ಎರಡು ಶಾಸನಗಳಿವೆ ಎಂದರು.
ಕುವೆಂಪು ವಿವಿ ಸಹಕಾರದೊಂದಿಗೆ ಅಧ್ಯಯನ ನಡೆಯಲಿ | ಉಡುತಡಿಯ ಕೋಟೆಯಲ್ಲಿ ಇದೀಗ ತಾನೆ ಕಸಪಯ್ಯನ ಹೊಸ ಶಾಸನ ಸಿಕ್ಕಿದೆ. ವಿಶ್ವದಾಖಲೆ 27 ವರ್ಷ ಕೆಳದಿ ಚೆನ್ನಮ್ಮ ರಾಜ್ಯವಾಳಿದ ಇತಿಹಾಸವಿದೆ. ಎಲ್ಲ ಶೋಧಗಳ ಹಿನ್ನಲೆಯಲ್ಲಿ ಶಿಕಾರಿಪುರದ ಹೊಸ ಚರಿತ್ರೆ, ರಾಜಕೀಯ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ನೆಲೆಗಳಲ್ಲಿ ರಚನೆಯಾಗಬೇಕಿದೆ. ಕುವೆಂಪು ವಿಶ್ವವಿದ್ಯಾಲಯದ ಸಹಕಾರದೊಂದಿಗೆ ರಾಜ್ಯ ಸರ್ಕಾರÀ ಸಮಗ್ರ ಸಾಂಸ್ಕøತಿಕ ಇತಿಹಾಸ ರಚಿಸುವ ಕೆಲಸ ಮಾಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.

error: Content is protected !!