ಸುದ್ದಿ ಕಣಜ.ಕಾಂ
ಶಿವಮೊಗ್ಗ: ತಾಲೂಕಿನ ಹುಣಸೋಡು ಸ್ಫೋಟ ಪ್ರಕರಣದ ಬಳಿಕ ಅನಧಿಕೃತ ಕ್ರಷರ್ ಗಳ ವಿಚಾರ ಮುನ್ನೆಲೆಗೆ ಬಂದಿದೆ. ಮಲೆನಾಡಿನಲ್ಲಿ ಅವ್ಯಾಹತವಾಗಿ ಅನಧಿಕೃತವಾಗಿ ಕ್ವಾರಿ ಮತ್ತು ಕ್ರಷರ್‍ಗಳನ್ನು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇವೆಲ್ಲವುಗಳ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸೋಮವಾರ ಮಾಧ್ಯಮಗೋಷ್ಠಿ ಕರೆದು ಇವುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇನ್ನುಳಿದಂತೆ, ಒಟ್ಟು 76 ಅಧಿಕೃತ ಕಲ್ಲು ಕ್ವಾರಿಗಳಿವೆ. ಶಿವಮೊಗ್ಗದಲ್ಲಿ 23, ತೀರ್ಥಹಳ್ಳಿಯಲ್ಲಿ 19, ಭದ್ರಾವತಿ 2, ಸಾಗರ 12 ಹಾಗೂ ಇನ್ನುಳಿದ 12 ಸೊರಬ ಮತ್ತು ಶಿಕಾರಿಪುರದಲ್ಲಿವೆ. 70ರಿಂದ 80 ಕ್ವಾರಿಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.