ಶಿವಮೊಗ್ಗದ ಏಳು ಪೊಲೀಸ್ ಠಾಣೆ ಅಪ್‍ಗ್ರೇಡ್, ಇದರಿಂದ ಏನು ಬದಲಾವಣೆ?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪೊಲೀಸ್ ಇಲಾಖೆಯು ಜಿಲ್ಲೆಯ ಏಳು ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಆದೇಶಿಸಿದೆ. ಇದರಿಂದ ಠಾಣೆಗಳಲ್ಲಿ ಆಡಳಿತಾತ್ಮಕ ವಿಚಾರಗಳಲ್ಲಿ ಕೆಲ ಬದಲಾವಣೆಗಳು ಆಗಲಿವೆ.
ಈ ಮುಂಚೆ ಮೇಲ್ದರ್ಜೆಗೇರಿಸಬಹುದಾದ ಠಾಣೆಗಳ ಮಾಹಿತಿಯನ್ನು ಕೇಳಲಾಗಿತ್ತು. ಅದಕ್ಕೆ ಪೂರಕವಾಗಿ ಮಾಹಿತಿಯೂ ನೀಡಲಾಗಿತ್ತು. ಈಗ ಕ್ರಮವಹಿಸಲಾಗಿದೆ.

ಇದನ್ನೂ ಓದಿ । ಮೆಡಿಕಲ್ ಸೀಟ್ ಕೊಡಿಸುವುದಾಗಿ ಭದ್ರಾವತಿ ವ್ಯಕ್ತಿಗೆ ಟೋಪಿ

ಮೇಲ್ದರ್ಜೆಗೇರಿದ ಠಾಣೆಗಳು: ತುಂಗಾನಗರ, ವಿನೋಬನಗರ, ಸಂಚಾರಿ, ಕೋಟೆ, ಭದ್ರಾವತಿ ಗ್ರಾಮಾಂತರ, ಸಾಗರ ಗ್ರಾಮಾಂತರ ಹಾಗೂ ತೀರ್ಥಹಳ್ಳಿ ಠಾಣೆಗಳು ಮೇಲ್ದರ್ಜೆಗೇರಿವೆ.
ಅಪ್‍ಗ್ರೇಡ್ ಮಾಡಿರುವ ಠಾಣೆಗಳಲ್ಲಿ ಕೆಲವು ಆಡಳಿತಾತ್ಮಕ ಬದಲಾವಣೆಗಳು ಆಗಲಿವೆ. ಈ ಏಳು ಠಾಣೆಗಳ ಮೇಲೆ ಪಿಎಸ್‍ಐಗಳ ಬದಲಿಗೆ ಇನ್ ಸ್ಪೆಕ್ಟರ್ ಗಳು ಠಾಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಈ ಮುಂಚೆ ಹೇಗಿತ್ತು: ಠಾಣೆಗಳು ಮೇಲ್ದರ್ಜೆಗೇರುವ ಮುನ್ನ ಶಿವಮೊಗ್ಗದಲ್ಲಿ ದೊಡ್ಡಪೇಟೆ, ಗ್ರಾಮಾಂತರ ಮತ್ತು ಕೋಟೆ ಪೊಲೀಸ್ ಠಾಣೆಗಳು ಮಾತ್ರ ವೃತ್ತಗಳಿದ್ದವು. ಇವುಗಳ ವ್ಯಾಪ್ತಿಗೆ ಇನ್ನುಳಿದ ಠಾಣೆಗಳು ಒಳಪಡುತ್ತಿದ್ದವು. ಆದರೆ ಈಗ ಜಯನಗರ ಪೊಲೀಸ್ ಠಾಣೆಯ ಹೊರತುಪಡಿಸಿ ಇನ್ನುಳಿದ ಠಾಣೆಗಳಿಗೆ ಪ್ರತ್ಯೇಕ ಇನ್‍ಸ್ಪೆಕ್ಟರ್ ಹುದ್ದೆ ಸೃಷ್ಟಿಯಾಗಲಿವೆ. ಇದು ಆಡಳಿತಾತ್ಮಕ ವಿಚಾರ ಮತ್ತು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಪೂರಕವಾಗಲಿದೆ.

ಇದನ್ನೂ ಓದಿ । ಮಂಗಳೂರಿನಿಂದ ಮಂತ್ರಾಲಯಕ್ಕೆ ನೂತನ ಬಸ್, ಯಾವಾಗಿಂದ ಆರಂಭ, ವೇಳಾಪಟ್ಟಿ ಏನು?

ಮೇಜರ್ ಸರ್ಜರಿ: ತೀರ್ಥಹಳ್ಳಿ ಪೊಲೀಸ್ ಠಾಣೆಗೆ ಡಿ.ಕೆ.ಸಂತೋಷ್ ಕುಮಾರ್, ತುಂಗಾನಗರಕ್ಕೆ ಎಂ.ಎಸ್.ದೀಪಕ್, ವಿನೋಬನಗರಕ್ಕೆ ಎನ್.ಎಸ್.ರವಿ, ಸಂಚಾರಿ ಪೊಲೀಸ್ ಠಾಣೆಗೆ ಎಚ್.ಎಂ.ಸಿದ್ದೇಗೌಡ, ಕೋಟೆಗೆ ಟಿ.ಕೆ.ಚಂದ್ರಶೇಖರ್, ಭದ್ರಾವತಿ ಗ್ರಾಮಾಂತರಕ್ಕೆ ಸಿ.ಜೆ.ಚೈತನ್ಯ, ಸಾಗರ ಗ್ರಾಮಾಂತರಕ್ಕೆ ಬಿ.ಸಿ.ಗಿರೀಶ್ ಅವರನ್ನು ನಿಯೋಜಿಸಲಾಗಿದೆ.

error: Content is protected !!