ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್‍ಗೆ ಅವಕಾಶ, ಸೆಂಟ್ರಲ್ ಜೈಲಿನಿಂದ ವಿನೂತನ ಹೆಜ್ಜೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ಶಿವಮೊಗ್ಗ ಕಾರಾಗೃಹದ ಬಂಧಿಗಳನ್ನು ಅವರ ಸಂಬಂಧಿಕರು ನೇರವಾಗಿ ಭೇಟಿ ಆಗುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ, ವಿಡಿಯೋ ಸಂದರ್ಶನ ಸೌಲಭ್ಯ ಕಲ್ಪಿಸಲಾಗಿದೆ.

ಇದನ್ನೂ ಓದಿ । 2023ರ ವೇಳೆಗೆ ಎಲ್ಲ ಸರ್ಕಾರಿ ನೌಕರರಿಗೆ ಕೇಂದ್ರ ನೌಕರರಷ್ಟೇ ಸಂಬಳ: ಸಿ.ಎಸ್.ಷಡಕ್ಷರಿ

ಬಂಧಿಗಳೊಂದಿಗೆ ಅವರ ಸಂಬಂಧಿಕರು ಮನೆಯಲ್ಲಿಯೇ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡುವ ಸೌಲಭ್ಯ ಇದಾಗಿದೆ. ವಿಡಿಯೋ ಕಾಲ್ ಮಾಡಲು ಈ ಕೆಳಗಿನ ವಿಧಾನ ಅನುಸರಿಸುವಂತೆ ಜೈಲಿನ ಮುಖ್ಯ ಅಧೀಕ್ಷಕ ಡಾ.ಪಿ.ರಂಗನಾಥ್ ತಿಳಿಸಿದ್ದಾರೆ.

ಕೋವಿಡ್ ಹಿನ್ನೆಲೆ ತಂತ್ರಜ್ಞಾನದ ಮೂಲಕ ಕಾರಾಗೃಹ ಬಂಧಿಗಳೊಡನೆ ವಿಡಿಯೋ ಕಾಲ್ ಮಾಡಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9480806469, 9480806467 ಸಂಪರ್ಕಿಸಿ.
– ಡಾ.ಪಿ.ರಂಗನಾಥ್, ಮುಖ್ಯ ಅಧೀಕ್ಷಕರು, ಶಿವಮೊಗ್ಗ ಸೆಂಟ್ರಲ್ ಜೈಲು

ಕಾಲ್ ಮಾಡುವುದಕ್ಕಾಗಿ ಹೀಗೆ ಮಾಡಿ

  • ಗೂಗಲ್ ನಲ್ಲಿ ಎನ್.ಪಿ.ಇ.ಪಿ. ಎಂದು ಸರ್ಚ್ ಮಾಡಿ ನಂತರ ನ್ಯೂ ವಿಸಿಟ್ ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು.
  • ಸಂದರ್ಶಕರು ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಕಡ್ಡಾಯ ಮಾಹಿತಿಗಳನ್ನು ಭರ್ತಿ ಮಾಡಬೇಕು.
  • ಬಂಧಿಗಳ ಮಾಹಿತಿ ಭರ್ತಿ ಮಾಡಬೇಕು. ಬಳಿಕ ವಿಡಿಯೋ ಕಾನ್ಫರೆನ್ಸ್ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
  • ಮೆಸೇಜ್ ಮತ್ತು ಇಮೇಲ್ ಗೆ ಬಂದಿರುವ ಒಟಿಪಿಯನ್ನು ಪೋರ್ಟಲ್ ನಲ್ಲಿ ಹಾಕಿ ಓಕೆ ಮಾಡಬೇಕು.
  • ಕಾರಾಗೃಹದ ಕಡೆಯಿಂದ ನಿಮ್ಮ ಸಂದರ್ಶನದ ಸಮಯವನ್ನು ನಿಗದಿಪಡಿಸಿದ ಬಳಿಕ ನಮೂದಿಸಿದ ಇಮೇಲ್ ಗೆ ವಿ.ಐ.ಎ.ಆರ್.ಎನ್. ನಂಬರ್, ಪಿನ್ ಮತ್ತು ಲಿಂಕ್ ಬರುತ್ತದೆ.
  • ಲಿಂಕ್ ಮೇಲೆ ಕ್ಲಿಕ್ ಮಾಡಿದ ಸಾಕು ವಿ.ಐ.ಎಸ್.ಆರ್.ಎನ್ ನಂಬರ್ ನೋಂದಾಯಿಸಿ ನೆಕ್ಸ್ಟ್ ಬಟನ್ ಕ್ಲಿಕ್ ಮಾಡಬೇಕು.
  • ಬಳಿಕ ಸ್ಕ್ರೀನ್ ನಲ್ಲಿ ನಿಮ್ಮ ಇಮೇಲ್ ಗೆ ಕಳುಹಿಸಿರುವ ಪಿನ್ ಮತ್ತು ನಿಮ್ಮ ಮೊಬೈಲ್ ಗೆ ಬರುವ ಒಟಿಪಿಯನ್ನು ಹಾಕಿ ಒತ್ತಬೇಕು. ಆಗ ಜಿಟ್ಸಿ ಮುಖಾಂತರ ವಿಡಿಯೋ ಸಂದರ್ಶನಕ್ಕೆ ಹಾಜರಾಗಲು ಕೇಳುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದ್ದಲ್ಲಿ ನಿಮ್ಮ ಸ್ನೇಹಿತ ಅಥವಾ ಸಂಬಂಧಿಗಳ ಜತೆ ಮಾತನಾಡಬಹುದು.

ಇದನ್ನೂ ಓದಿ । ಲಕ್ಷಾಂತರ ಜನರಿಗೆ ಪಿಡುಗಾಗಿ ಕಾಡುತ್ತಿರುವ ಹಕ್ಕಿ ಜ್ವರ ಕಂಪ್ಲೀಟ್ ರಿಪೋರ್ಟ್

error: Content is protected !!