ಸುದ್ದಿ ಕಣಜ.ಕಾಂ
ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದ ತಡಗಣಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿಗೆ `ಶಿವಶರಣೆ ಅಕ್ಕಮಹಾದೇವಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜು’ ಎಂದು ನಾಮಕರಣ ಮಾಡಿರುವ ಆದೇಶದ ಪ್ರತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದೇಶ ಪ್ರತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಹಿ ಕೂಡ ಇದೆ. 2021ರ ಫೆಬ್ರವರಿ 2 ಎಂದು ದಿನಾಂಕ ನಮೂದಿಸಲಾಗಿದೆ.
ಬೇಡಿಕೆ ಇದೆ | ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ಕಮಹಾದೇವಿ ಅವರ ಹೆಸರಿನಿಂದ ನಾಮಕರಣ ಮಾಡಬೇಕು ಎಂಬುವುದು ಹಲವು ವರ್ಷಗಳ ಬೇಡಿಕೆ ಇದೆ.
ಅಧಿಕಾರಿಗಳು ಏನೇನ್ನುತ್ತಾರೆ | ಕಾಲೇಜು ಮೂಲಗಳು ಹೇಳುವಂತೆ, ಇಂತಹ ಆದೇಶದ ಪ್ರತಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಯಾವುದೇ ಆದೇಶಗಳು ಕೈಸೇರಿಲ್ಲ. ಮೇಲಾಧಿಕಾರಿಗಳಿಂದಲೂ ಮಾಹಿತಿ ಬಂದಿಲ್ಲ ಎಂದು ತಿಳಿಸಿವೆ.
ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್ ನಲ್ಲಿಯೂ ಈ ಬಗ್ಗೆ ಯಾವ ಆದೇಶವೂ ಅಪ್ ಲೋಡ್ ಮಾಡಿಲ್ಲ.