ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕೆಲವು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಸರಣಿ ಸರಗಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ಪಲ್ಸರ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಕೆಲವು ತಿಂಗಳು ನೆಮ್ಮದಿಯಿಂದಿದ್ದ ಶಿವಮೊಗ್ಗ ನಗರದಲ್ಲಿ ಮತ್ತೆ ಪಲ್ಸರ್ ಗ್ಯಾಂಗ್ ಸಕ್ರಿಯವಾಗಿದೆ.
ಶಿವಮೊಗ್ಗದ 9 ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಹೊರ ವಲಯದಿಂದ ಬರುವವರ ಮೇಲೆ ಕಣ್ಣಿಡಲಾಗಿದೆ. ಸಾರ್ವಜನಿಕರು ವಿಶೇಷ ಜವಾಬ್ದಾರಿ ವಹಿಸಬೇಕು. ಮನೆ ಬಾಡಿಗೆ ನೀಡಬೇಕಾದರೆ ಎಚ್ಚರಿಕೆ ವಹಿಸಬೇಕು. ಅನುಮಾನಾಸ್ಪದವಾಗಿ ಯಾರಾದರೂ ಕಂಡಲ್ಲಿ 112 ಗೆ ಕರೆ ಮಾಡಿ ಮಾಹಿತಿ ನೀಡಿ.
– ಕೆ.ಎಂ.ಶಾಂತರಾಜು, ಎಸ್.ಪಿ., ಶಿವಮೊಗ್ಗ
ಒಂದು ವಾರದಲ್ಲಿ ಮೂರನೇ ಪ್ರಕರಣ | ಅಶೋಕ ರಸ್ತೆಯಲ್ಲಿ ಮಂಗಳವಾರ ಮಹಿಳೆಯೊಬ್ಬರಿಂದ 35 ಗ್ರಾಂ ಚಿನ್ನದ ಸರವನ್ನು ದೋಚಲಾಗಿದೆ. ಕಳೆದ ಭಾನುವಾರ ಕೋಟೆ ಪ್ರದೇಶದಲ್ಲಿ ಒಂಟಿ ಮಹಿಳೆಯೊಬ್ಬರ 30 ಗ್ರಾಂ. ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದರು. ಮೂರು ದಿನಗಳ ಹಿಂದೆ ಬೆಕ್ಕಿನಕಲ್ಮಠ ಸಮೀಪ ಮಹಿಳೆಯ ಸರಗಳ್ಳತನ ಮಾಡಲಾಗಿತ್ತು.