ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಎರಡು ಕಡೆ ದಾಳಿ ನಡೆಸಿರುವ ದೊಡ್ಡಪೇಟೆ ಠಾಣೆ ಪೊಲೀಸರು ಒಟ್ಟು 31 ಗ್ಯಾಸ್ ವಶಕ್ಕೆ ಪಡೆದು, ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಣ್ಣಾನಗರದ ನಿವಾಸಿ ಸಮೀರ್ ಅಹಮದ್ (34) ಹಾಗೂ ಬುದ್ಧನಗರ ಶೋಯೇಬ್ (29) ಬಂಧಿತ ಆರೋಪಿಗಳು.
ಇದನ್ನೂ ಓದಿ । ಉಂಬ್ಳೇಬೈಲು to ಭದ್ರಾ ಫಾರೆಸ್ಟ್, ಆನೆಗಳ ಚಾಣಾಕ್ಷತನಕ್ಕೆ ಈ ಘಟನೆಯೇ ಸಾಕ್ಷಿ
ಖಚಿತ ಮಾಹಿತಿ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತು ದೊಡ್ಡಪೇಟೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಎರಡೂ ಪ್ರಕರಣಗಳಲ್ಲಿ ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ, ಡಂಪಿಂಗ್ ಮತ್ತು 2 ರೀಫಿಲ್ಲಿಂಗ್ ಮಾಡಲು ಬಳಸುತ್ತಿದ್ದ ಮೋಟಾರ್ಗಳನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 1 | ಸವಾಯಿಪಾಳ್ಯದಲ್ಲಿ ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಅಣ್ಣಾನಗರದ ನಿವಾಸಿ ಸಮೀರ್ ಅಹಮದ್ ಕಡೆ 17 ಗ್ಯಾಸ್ ಜಪ್ತಿ ಮಾಡಲಾಗಿದೆ.
ಪ್ರಕರಣ 2 | ಬುದ್ಧನಗರದಲ್ಲಿ ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿದ್ದ ಶೋಯೇಬ್ ಎಂಬಾತನನ್ನು ವಶಕ್ಕೆ ಪಡೆದು ಆತನಿಗೆ 14 ಸಿಲಿಂಡರ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ । ರಸ್ತೆಗಿಳಿದ ಎತ್ತಿನಗಾಡಿ, ಕುದುರೆ ಗಾಡಿ, ಸೌದೆ ಹೊರೆ!
ಕಾರ್ಯಾಚರಣೆ | ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಗಳನ್ನು ಬೇರೆ ಸಿಲಿಂಡರ್ಗಳಿಗೆ ಮತ್ತು ವಾಹನಗಳಿಗೆ ಅಕ್ರಮವಾಗಿ ಡಂಪಿಂಗ್ ಮತ್ತು ರೀಫಿಲ್ಲಿಂಗ್ ಮಾಡುತ್ತಿರುವ ಬಗ್ಗೆ ಲಭ್ಯ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಲಾಗಿದೆ.
ದೊಡ್ಡಪೇಟೆ ಠಾಣೆಯ ಪೊಲೀಸ್ ನಿರೀಕ್ಷಕ ವಸಂತಕುಮಾರ್, ಪಿ.ಎಸ್.ಐ ಶಂಕರ್ ಮೂರ್ತಿ, ಮಂಜುನಾಥ್, ಸಿಬ್ಬಂದಿ ಲಚ್ಚಾ ನಾಯ್ಕ್, ಸುಬ್ರಾಯ, ಸುದರ್ಶನ್, ರಮೇಶ್ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಹಾರ ನಿರೀಕ್ಷಕ ಶಿವಾನಂದ್ ಅಜ್ಜಂಪುರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.