ಸುದ್ದಿ ಕಣಜ.ಕಾಂ
ಶಿವಮೊಗ್ಗ: ಫೇಸ್ಬುಕ್ ನಕಲಿ ಖಾತೆ ಸೃಷ್ಟಿಸಿ ಮಹಿಳೆಯೊಬ್ಬರ ಹೆಸರು ದುರ್ಬಳಕೆ ಮಾಡಿದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಮಹಿಳೆಯೊಬ್ಬರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿದ್ದಲ್ಲದೇ ಆಕೆ ಫೋಟೊ ಅಪ್ಲೋಡ್ ಕೂಡ ಮಾಡಿದ್ದ. ನಕಲಿ ಖಾತೆಯಿಂದ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಂಧಿತ ಯಾರು | ಮೈಸೂರಿನ ನಂಜನಗೂಡು ನಿವಾಸಿ ಸುಪ್ರೀತ್ (22) ಎಂಬಾತ ಬಂಧಿತ ವ್ಯಕ್ತಿ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.