ಸುದ್ದಿ ಕಣಜ.ಕಾಂ
ತೀರ್ಥಹಳ್ಳಿ: ಕಾಲು ಜಾರಿ ಕೆರೆಗೆ ಬಿದ್ದ ಪರಿಣಾಮ ರೈತ ಮೃತಪಟ್ಟಿದ್ದಾನೆ. ತಾಲೂಕಿನ ಶಿರೂರು ಗ್ರಾಮದ ಕಲ್ಲಹಳ್ಳಿ ನಿವಾಸಿ ರೈತ ಸುಬ್ಬ ನಾಯ್ಕ(68) ಮೃತ ರೈತ.
ತೋಟಕ್ಕೆ ಹೋದಾಗ ಈ ಘಟನೆ ನಡೆದಿದೆ. ತೋಟಕ್ಕೆ ಕೆರೆಯಿಂದ ನೀರು ಬಿಡುವುದಕ್ಕೆ ಹೋದ ಸುಬ್ಬ ನಾಯ್ಕ ಅವರು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.