ಸುದ್ದಿ ಕಣಜ.ಕಾಂ
ಬೆಂಗಳೂರು: ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಿದ್ದ ಎಫ್.ಡಿ.ಎ ಪರೀಕ್ಷೆಗಳಿಗೆ ಮರು ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಇದನ್ನೂ ಓದಿ । ನಾಳೆ ನಡೆಯಬೇಕಿದ್ದ ಎಫ್.ಡಿ.ಎ ಪರೀಕ್ಷೆ ಮುಂದೂಡಿಕೆ
ಎಷ್ಟು ಕೇಂದ್ರಗಳಲ್ಲಿ ಪರೀಕ್ಷೆ | ಫೆಬ್ರವರಿ 28ರಂದು ಪರೀಕ್ಷೆ ನಡೆಸಲು ಕೆ.ಪಿ.ಎಸ್.ಸಿ ನಿರ್ಧರಿಸಿದೆ. ಈ ಮುಂಚೆ ನಿರ್ಧಾರವಾಗಿರುವಂತೆಯೇ ರಾಜ್ಯದ ಒಟ್ಟು 1057 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಇದುವರೆಗೆ 2.88 ಲಕ್ಷ ಅಭ್ಯರ್ಥಿಗಳು ಹಾಲ್ ಟಿಕೆಟ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ.
ಹಾಲ್ ಟಿಕೆಟ್ ಬಗ್ಗೆ ಅಸ್ಪಷ್ಟತೆ | 28ರಂದು ನಡೆಯುವ ಪರೀಕ್ಷೆಗೆ ಈ ಹಿಂದೆ ಡೌನ್ ಲೋಡ್ ಮಾಡಿಕೊಂಡಿರುವ ಹಾಲ್ ಟಿಕೆಟ್ ಸಾಕೋ ಅಥವಾ ಬೇರೆಯದ್ದು ಬೇಕೋ ಎಂಬುವುದನ್ನು ಶೀಘ್ರವೇ ತಿಳಿಸುವುದಾಗಿ ಕೆ.ಪಿ.ಎಸ್.ಸಿ ತಿಳಿಸಿದೆ.