ಹೊಸನಗರದಲ್ಲಿ ಶ್ರೀ ಮಾರಿಕಾಂಬಾ ಜಾತ್ರೆಗೆ ಚಾಲನೆ, ಅದ್ಧೂರಿ ಮೆರವಣಿಗೆ

 

 

hosanagara marikamba jatreಸುದ್ದಿ ಕಣಜ.ಕಾಂ
ಹೊಸನಗರ: ಪಟ್ಟಣದ ಗ್ರಾಮ ದೇವತೆ ಶ್ರೀ ಮಾರಿಕಾಂಬಾ ದೇವಿಯ ವರ್ಷಾವಧಿ ಜಾತ್ರೆಗೆ ಮಂಗಳವಾರ ಚಾಲನೆ ದೊರೆತಿದೆ.
ಜಾತ್ರಾ ಮಹೋತ್ಸವವು 9 ದಿನ ನಡೆಯಲಿದ್ದು, ಮಂಗಳವಾರ ಅಮ್ಮನವರ ಉಡಿ ತುಂಬಿ ಪೂಜೆ ಸಲ್ಲಿಸಲು ಭಕ್ತಾದಿಗಳು ಸಾಲುಗಟ್ಟಿ ನಿಂತಿದ್ದರು.
ಫೆಬ್ರವರಿ 17ರಂದು ವಿಸರ್ಜನೆ | ಹಳೆಯ ಸಾಗರ ರಸ್ತೆಯ ಶ್ರೀದೇವಿ ತವರುಮನೆ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ ಅಮ್ಮನವರ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಎಲ್ಲ ಧಾರ್ಮಿಕ ವಿಧಿ ವಿಧಾನಗಳನ್ನು ಪೂರ್ಣಗೊಂಡ ನಂತರ ಅಮ್ಮನವರ ಮೂರ್ತಿಯನ್ನು ಮಾರಿ ಗುಡ್ಡದಲ್ಲಿರುವ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಫೆಬ್ರವರಿ 17ರಂದು ಶ್ರೀಮೂರ್ತಿಯ ವಿಸರ್ಜನೆ ನಡೆಯಲಿದೆ.

error: Content is protected !!