ರೌಡಿ ಪರೇಡ್‍ನಲ್ಲಿ ಎಸ್.ಪಿ ಖಡಕ್ ವಾರ್ನಿಂಗ್, ನೀಡಿದ ಸೂಚನೆಗಳೇನು?

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಇತ್ತೀಚೆಗೆ ನಗರದಲ್ಲಿ ಹೆಚ್ಚಿರುವ ಕೊಲೆ, ಸರಗಳ್ಳತನ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ನಗರದ ಡಿಎಆರ್ ಮೈದಾನದಲ್ಲಿ ಗುರುವಾರ ರೌಡಿ ಪರೆಡ್ ಮಾಡಿದರು.
ದೊಡ್ಡಪೇಟೆ, ತುಂಗಾನಗರ, ಗ್ರಾಮಾಂತರ ಹಾಗೂ ಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯ 156 ರೌಡಿಗಳನ್ನು ಕರೆಸಿ ಎಸ್.ಪಿ. ವಾರ್ನಿಂಗ್ ನೀಡಿದರು.
ಎಸ್.ಪಿ. ನೀಡಿದ ಎಚ್ಚರಿಕೆಗಳೇನು?

  • ಬಾರ್ ಬಳಿ ಗಲಾಟೆ ಸೇರುವಂತಿಲ್ಲ. ಗಲಾಟೆ ಮಾಡುವಂತಿಲ್ಲ
  • ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ್ದಲ್ಲಿ ಕಠಿಣ ಕ್ರಮ
  • ಒಂದು ಬ್ಲೇಡ್ ಸಿಕ್ಕರೂ ರೌಡಿಶೀಟರ್ ವಿರುದ್ಧ ಆಕ್ಶನ್
  • ಚಹದಂಗಡಿ ಮುಂದೆ, ಬಾರ್ ಆಂಡ್ ರೆಸ್ಟೋರೆಂಟ್ ಪಾರ್ಕಿಂಗ್ ನಲ್ಲಿ ಗಂಟೆಗಟ್ಟಲೇ ಕಳೆಯುವಂತಿಲ್ಲ
  • ಜಾಮೀನು ಮೇಲೆ ಹೊರಬಂದವರ ಬಳಿ ಮಾರಕಾಸ್ತ್ರ ಕಂಡುಬಂದರೆ, ಬೇಲ್ ರದ್ದು

error: Content is protected !!